ಹಾಸನ : ಮೆಕ್ಕೆಜೋಳ ಕಟಾವು ಮಾಡುವ ವೇಳೆ ರೈತನಿಗೆ ಕೊಳಕು ಮಂಡಲ ಹಾವು ಕಚ್ಚಿದ್ದು. ಕಡಿತಕ್ಕೊಳಗಾದ ರೈತ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ಹಾಸನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ಹಾವೇರಿ ಮೂಲದ 40 ವರ್ಷದ ಮುತ್ತು ಎಂಬಾತ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಾರೋಹಳ್ಳಿ ಗಡಿ ಬಳಿ ಹೊಲದಲ್ಲಿ ಮೆಕ್ಕೆಜೋಳ ಕಟಾವು ಮಾಡುತ್ತಿದ್ದ. ಈ ವೇಳೆ ಮುತ್ತುವಿನ ಕೈಗೆ ಕೊಳಕು ಮಂಡಲ ಹಾವು ಕಚ್ಚಿದೆ. ಕೂಡಲೇ ಕೊಳಕು ಮಂಡಲ ಹಾವನ್ನು ಹಿಡಿದು ಪ್ಲಾಸ್ಟಿಕ್ ಕವರ್ಗೆ ಹಾಕಿಕೊಂಡ ಮುತ್ತು, ನೇರವಾಗಿ ಬೇಲೂರು ತಾಲ್ಲೂಕು ಆಸ್ಪತ್ರೆಗೆ ಬಂದಿದ್ದಾನೆ.
ಇದನ್ನೂ ಓದಿ : ಪೊಲೀಸರಿಂದ ಹಲ್ಲೆ : ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿ ಪ್ರತಿಭಟನೆಗೆ ಕುಳಿತ ಚಾಲಕ !
ಹಾವಿನ ಸಮೇತ ಆಸ್ಪತ್ರೆಗೆ ಬಂದ ಮುತ್ತುವನ್ನು ನೋಡಿದ ಆಸ್ಪತ್ರೆ ಸಿಬ್ಬಂದಿಗಳು ಬೆಚ್ಚಿಬಿದ್ದಿದ್ದು. ಆಸ್ಪತ್ರೆಯ ವೈದ್ಯರಾದ ಡಾ. ಸುಧಾ ಅವರು ಮುತ್ತುವಿಗೆ ಚಿಕಿತ್ಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.