Wednesday, January 22, 2025

ಸುವರ್ಣ ಸೌಧದಲ್ಲಿ ಭಾರಿ ಭದ್ರತಾ ಲೋಪ : ನಕಲಿ ಐಡಿ ಕಾರ್ಡ್​ ಧರಿಸಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನ !

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಬಗ್ಗೆ ಸಿಟಿ ರವಿ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರವಾಗಿ ಇಂದು ಸುವರ್ಣ ಸೌದ ಕೆಂಡದಂತೆ ಬದಲಾಗಿದ್ದು. ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ನಕಲಿ ಐಡಿ ಕಾರ್ಡ ಧರಿಸಿ ಬಂದಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಪಿ.ಎ ಸಂಗಮೇಶ್​ ಸೇರಿದಂತೆ ಅನೇಕ  ಬೆಂಬಲಿಗರು ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದು. ಕೂದಲೆಳೆ ಅಂತರದಲ್ಲಿ ಸಿ.ಟಿ ರವಿ ಪಾರಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಾರ್ಷಲ್​ಗಳು ಉದ್ರಿಕ್ತರನ್ನು ತಡೆದಿದ್ದು. ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸ್ಥಳಕ್ಕೆ ಬೆಳಗಾವಿ ಪೊಲೀಸ್​ ಆಯುಕ್ತ ಯಡಮಾರ್ಟಿನ್​ ಭೇಟಿ ನೀಡಿದ್ದು. ಪರಿಸ್ಥಿತಿಯನ್ನು ಹತೋಟಿಗೆತರಲು ಯತ್ನಿಸುತ್ತಿದ್ದಾರೆ.

ನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದ ಸಿ,ಟಿ ರವಿ !

ಹಲ್ಲೆ ವಿಚಾರವಾಗಿ ಮಾತನಾಡಿದ ಸಿ.ಟಿ ರವಿ ‘ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ನನ್ನ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದು. ಚಿಕ್ಕಮಗಳೂರಿನಲ್ಲಿರುವ ಸಿ.ಟಿ ರವಿ ಅವರ ನಿವಾಸಕ್ಕೆ ಪೊಲೀಸರು ಭದ್ರತೆ ಹೊದಗಿಸಿದ್ದಾರೆ ಎಂದು ತಿಳಿದು ಬಂದಿದೆ

RELATED ARTICLES

Related Articles

TRENDING ARTICLES