Wednesday, January 22, 2025

ಸಿ.ಟಿ ರವಿ ವಿರುದ್ದ ದೂರು ದಾಖಲಿಸಿದ ಲಕ್ಷ್ಮೀ ಹೆಬ್ಬಾಳ್ಕರ್​ : ಬಂಧನದ ಭೀತಿಯಲ್ಲಿ ಸಿ.ಟಿ ರವಿ

ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ದ ಅವಹೇಳನಕಾರಿ ಪದ ಬಳಕೆ ಮಾಡಿದ ಆರೋಪದ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್​ ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು. ಭಾರತೀಯ ಸುರಕ್ಷಾ ಸಂಹಿತಿಯ ಸೆಕ್ಷನ್​ 75 ಮತ್ತು 79 ರಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

ವಿಧಾನ ಪರಿಷತ್​ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ದ ಅಶ್ಲೀಲ ಪದ ಬಳಕೆ ಮಾಡಿದ ಆರೋಪದ ಮೇಲೆ ಸಿ.ಟಿ ರವಿ ಮೇಲೆ ಪ್ರಕರಣ ದಾಖಲಾಗಿದ್ದು. ಸಿ.ಟಿ ರವಿ ಬಂಧನವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಿ.ಟಿ ರವಿ ಮೇಲೆ ಹಲ್ಲೆಗ ಯತ್ನ !

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​​ ಬಗ್ಗೆ ಸಿಟಿ ರವಿ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರವಾಗಿ ಇಂದು ಸುವರ್ಣ ಸೌದ ಕೆಂಡದಂತೆ ಬದಲಾಗಿದ್ದು. ಲಕ್ಷ್ಮೀ ಹೆಬ್ಬಾಳ್ಕರ್​ ಬೆಂಬಲಿಗರು ನಕಲಿ ಐಡಿ ಕಾರ್ಡ ಧರಿಸಿ ಬಂದಿ ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಪಿ.ಎ ಸಂಗಮೇಶ್​ ಸೇರಿದಂತೆ ಅನೇಕ  ಬೆಂಬಲಿಗರು ಸಿ.ಟಿ ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದು. ಕೂದಲೆಳೆ ಅಂತರದಲ್ಲಿ ಸಿ.ಟಿ ರವಿ ಪಾರಾಗಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಮಾರ್ಷಲ್​ಗಳು ಉದ್ರಿಕ್ತರನ್ನು ತಡೆದಿದ್ದು. ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸ್ಥಳಕ್ಕೆ ಬೆಳಗಾವಿ ಪೊಲೀಸ್​ ಆಯುಕ್ತ ಯಡಮಾರ್ಟಿನ್​ ಭೇಟಿ ನೀಡಿದ್ದು. ಪರಿಸ್ಥಿತಿಯನ್ನು ಹತೋಟಿಗೆತರಲು ಯತ್ನಿಸುತ್ತಿದ್ದಾರೆ.

 

RELATED ARTICLES

Related Articles

TRENDING ARTICLES