ಕಾರವಾರ : ಶಾಲಾ ಪ್ರವಾಸಕ್ಕೆ ಬಂದಿದ್ದ ಬಾಲಕ ತೆರೆದ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಉತ್ತರಕನ್ನಡದಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಯನ್ನು 14 ವರ್ಷದ ನಿರುಪಾದಿ ದುರ್ಗಪ್ಪ ಹರಿಜನ ಎಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊಪ್ಪಳ ಜಿಲ್ಲೆಯೆ ಯಲಬುರ್ಗ ತಾಲ್ಲೂಕಿನ ಗಾಣದಾಳ ಗ್ರಾಮದ ನೂರಕ್ಕೂ ಹೆಚ್ಚು ವಿಧ್ಯಾರ್ಥಿಗಳು ಪ್ರವಾಸಕ್ಕೆ ಬಂದಿದ್ದರು. ಎರಡು ಬಸ್ಗಳಲ್ಲಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳು ಜೋಗ ಜಲಪಾತವನ್ನು ನೋಡಿಕೊಂಡು ಕೊಲ್ಲೂರಿನ ಕಡೆಗೆ ಹೊರಟ್ಟಿದ್ದರು. ಈ ವೇಳೆ ಮಾರ್ಗಮಧ್ಯೆ ಮಾತ್ರೆ ಖರೀದಿಸಲು ಭಟ್ಕಳದ ಸಮೀಪ ಬಸ್ ನಿಲ್ಲಿಸಿದ್ದು. ಮಕ್ಕಳು ಮೂತ್ರ ವಿಸರ್ಜನೆಗೆ ಎಂದು ಬಸ್ನಿಂದ ಕೆಳಗೆ ಇಳಿದಿದ್ದರು.
ರಸ್ತೆ ಅಗಲಿಕರಣ ಯೋಜನೆಗೆ ಭೂಸ್ವಾಧೀನವಾದ ಸ್ಥಳದಲ್ಲಿ ತೆರೆದ ಬಾವಿ ಇರುವುದನ್ನು ನೋಡದ ವಿದ್ಯಾರ್ಥಿ 14 ವರ್ಷದ ನಿರುಪಾದಿ ದುರ್ಗಪ್ಪ ಹರಿಜನ ಪಾಳು ಬಾವಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.