Saturday, January 18, 2025

ಬೇರೆಯವರನ್ನು ಮದುವೆಯಾದರು, ಸಾವಿನಲ್ಲಿ ಒಂದಾದ ಪ್ರೇಮಿಗಳು !

ಮಂಡ್ಯ : ಮದುವೆಯಾಗಿದ್ದರು ಕೂಡ ಮಹಿಳೆಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು. ಇದನ್ನು ತಿಳಿಯುತ್ತಿದ್ದಂತೆ ಮಹಿಳೆಯ ಪ್ರಿಯತಮನು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಮಂಡ್ಯದ ಯರಹನಹಳ್ಳಿಯ ಗ್ರಾಮದ 20 ವರ್ಷದ ಸೃಷ್ಠಿ ಮತ್ತು ಬನ್ನಹಳ್ಳಿ ಗ್ರಾಮದ 25 ವರ್ಷದ ಪ್ರಸನ್ನ ಕಳೆದ ಕೆಲವು ವರ್ಷಗಳಿಂದ ಒಬ್ಬರನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕಾರಣಾಂತರದಿಂದ ವರ್ಷದ ಕೆಳಗೆ ಸೃಷ್ಠಿ ದಿನೇಶ್​ ಎಂಬಾತನನ್ನು ಮತ್ತು ಪ್ರಸನ್ನ ಸ್ಪಂದನ ಎಂಬಾತನನ್ನು ವಿವಾಹವಾಗಿದ್ದರು.

ಆದರೆ ಕಳೆದ ಡಿಸೆಂಬರ್​ 11ರಂದು ಸೃಷ್ಟಿ ಗಂಡನ ಮನೆಯಿಂದ ನಾಪತ್ತೆಯಾಗಿದ್ದಳು. ನಾಪತ್ತೆಯಾಗಿದ್ದ ಸೃಷ್ಠಿಯ ಮೃತದೇಹ ನಿನ್ನ (ಡಿ.16ರಂದು) ವೈದ್ಯನಾಥಪುರ ಗ್ರಾಮದ ಶಿಂಷಾ ನದಿಯಲ್ಲಿ ಪತ್ತೆಯಾಗಿದ್ದು. ಅದೇ ದಿನ ಪ್ರಸನ್ನ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮದ್ದೂರು ಪೊಲೀಸ್​ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES