ವಿಜಯಪುರ : ಹೊಸ ವರ್ಷಕ್ಕೆ ಡಾಬಾ, ಹೊಟೇಲ್ ಗಳಲ್ಲಿ ಮದ್ಯದ ಪಾರ್ಟಿ ಮಾಡೋಕೆ ಪ್ಲ್ಯಾನ್ ಹಾಕಿಕೊಂಡವರು ಈ ಸ್ಟೋರಿಯನ್ನ ನೋಡಲೇಬೇಕು. ಸ್ವಲ್ಪ ಯಾಮಾರಿದ್ರೆ ನಿಮಗೆ ಈ ಗ್ಯಾಂಗ್ ನಕಲಿ ಲಿಕ್ಕರ್ ಕುಡಿಸಿ ಬಿಡುತ್ತೆ. ಯಾಕಂದ್ರೆ ವಿಜಯಪುರದಲ್ಲಿ ಅಸಲಿ ಬ್ರಾಂಡೆಡ್ ಕಂಪನಿಗಳ ಹೋಲುವ ನಕಲಿ ಮದ್ಯ ತಯಾರಿಸುತ್ತಿದ್ದ ಗ್ಯಾಂಗ್ ಸಿಕ್ಕಿ ಬಿದ್ದಿದೆ. ಖದೀಮರ ನಕಲಿ ದಂಧೆಯನ್ನ ಕಂಡು ಸ್ವತಃ ಅಬಕಾರಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.
ಹೌದು, ಹೊಸ ವರ್ಷಕ್ಕೆ ಮದ್ಯದ ಪಾರ್ಟಿ ಮಾಡಲು ಹೊರಟವರಿಗೆ ಇದೊಂದು ಶಾಕಿಂಗ್ ಸುದ್ದಿ. ಹೊಸ ವರ್ಷ ಬಂದಾಗ ಯುವಕರು, ಮದ್ಯ ಪ್ರೀಯರು ಮದ್ಯದ ಪಾರ್ಟಿಗಳನ್ನ ಆಯೋಜಿಸೋದು ಸರ್ವೇ ಸಾಮಾನ್ಯ. ಅದರಲ್ಲೂ ಜಿಲ್ಲಾ, ಗ್ರಾಮೀಣ ಪ್ರದೇಶಗಳಲ್ಲಿ ಡಾಬಾ ಅಥವಾ ನಗರ ಹೊರ ವಲಯಗಳ ಹೊಟೇಲ್ ಗಳಲ್ಲಿ ಮದ್ಯದ ಪಾರ್ಟಿ ಆಯೋಜಿಸ್ತಾರೆ. ಆಗ ನಡೆಯೋ ಪಾರ್ಟಿಯಲ್ಲಿ ಬ್ರಾಂಡೆಡ್ ಮದ್ಯದ ಹೊಳೆಯೆ ಹರಿಯುತ್ತೆ.
ಇದನ್ನೂ ಓದಿ : ಜಿಲ್ಲಾಸ್ಪತ್ರೆಯ ಮೇಲ್ಚಾವಣಿ ಕುಸಿತ : 2 ವರ್ಷದ ಮಗು ಸೇರಿ ಮೂವರಿಗೆ ಗಾಯ !
ಆದರೆ ವಿಜಯಪುರ ಜಿಲ್ಲೆಯಲ್ಲಿ ಇದೊಂದು ಗ್ಯಾಂಗ್ ಹೊಸ ವರ್ಷಕ್ಕೆ ಬ್ರಾಂಡೆಡ್ ಕಂಪನಿಗಳ ಹೋಲುವ ನಕಲಿ ಮದ್ಯದ ಬಾಟಲ್ಗಳನ್ನು ತಯಾರಿಸಿ ಹಂಚಲು ರೆಡಿಯಾಗಿತ್ತು. ಅಷ್ಟರಲ್ಲೆ ಸಿಂದಗಿ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಇಡೀ ನಕಲಿ ಮದ್ಯ ತಯಾರಿಸೋ ಗ್ಯಾಂಗ್ ಸಿಕ್ಕಿಬಿದ್ದಿದೆ. ಸಿಂದಗಿ ಹೊರ ವಲಯದಲ್ಲಿ ನಕಲಿ ಮದ್ಯ ತಯಾರಿಸೋ ಅಡ್ಡೆ ಹುಟ್ಟಿಕೊಂಡಿತ್ತು.
ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ಒಟ್ಟು ಐವರು ಖದೀಮರನ್ನ ಬಂಧಿಸಿದ್ದಾರೆ. ಜಮೀನಿನ ಮಾಲೀಕ ಅಮೋಘಸಿದ್ದ, ಹುಬ್ಬಳ್ಳಿಯ ಕೃಷ್ಣಾ ಬಾಂಡಗೆ, ಅಕ್ಷಯ ಜಾಧವ, ಅಭೀಷೇಕ್, ನಾಗರಾಜ್, ವಿನಾಯಕ್ ಬಂಧಿತ ಆರೋಪಿಗಳು.ಇನ್ನು ದಾಳಿ ವೇಳೆ 8ಲಕ್ಷ 50ಸಾವಿರ ನಕಲಿ ಬ್ರಾಡೆಂಡ್ ಮದ್ಯ, ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಖದೀಮರು ಸೆಕೆಂಡ್ ಹ್ಯಾಂಡ್ ಬ್ರಾಂಡೆಡ್ ಮದ್ಯದ ಬಾಟಲಿ ಸಂಗ್ರಹಿಸುತ್ತಿದ್ದರು. ಅಸಲಿಯಂತೆ ಕಾಣುವ ನಕಲಿ ಸ್ಟಿಕ್ಕರ್, ನಕಲಿ ಸೀಲ್, ಸರ್ಕಾರಿ ಹಾಲೊಗ್ರಾಮ್ ಸಹಿತ ನಕಲಿ ತಯಾರಿಸಿ ಈ ಮೂಲಕ ಬ್ರಾಂಡೆಡ್ ಮದ್ಯದ ಬಾಟಲಿಗಳನ್ನ ತಯಾರಿಸುತ್ತಿದ್ದರು. ಇದರಲ್ಲಿ ಕಳಪೆ ಮಟ್ಟದ ಸ್ಪೀರಿಟ್, ಕಳಪೆ ಕಲರ್, ವಾಸನೆಗೆ ಕಳಪೆ ಪ್ಲೇವರ್ ಸಹ ಬಳಕೆ ಮಾಡಡುತ್ತಿದ್ದರು ಎನ್ನುವ ಅಂಶಗಳು ಬಯಲಾಗಿವೆ.
ಇನ್ನು ಮಧ್ಯೆದ ಬಾಟಲಿಯಲ್ಲಿ ಯಾವುದು ನಕಲಿ ಯಾವುದು ಅಸಲಿ ಎಂದು ಗುರುತಿಸುವುದೆ ಕಷ್ಟಕರವಾಗಿದ್ದು. ಖದೀಮರು ಗುವಾಹಟಿಯಿಂದ ಎರಡು ಕಂಪನಿಗಳ ನಕಲಿ ಸ್ಟಿಕರ್, ಸೀಲ್ ಮತ್ತು ಕರ್ನಾಟಕದ ಹೋಲೋಗ್ರಾಮ್ ಸಹಿತವಾಗಿ ಎಲ್ಲವನ್ನು ನಕಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಇದರ ಕುರಿತು ತನಿಖೆ ನಡೆಸಲು ಅಬಕಾರಿ ಪೊಲೀಸರು ತಂಡವನ್ನು ರಚಿಸಿದ್ದು. ಇದರ ಜಾಲವನ್ನು ಭೇದಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.