ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕನಿಷ್ಟ ಉಷ್ಣಾಂಶ ಕುಸಿಯುತ್ತಿದ್ದು. ಚಳಿಯ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಆಘಾತಕಾರಿ ಮಾಹಿತಿಯೊಂದು ಬಂದಿದ್ದು. ಚಳಿಯಲ್ಲಿ ವಾಕಿಂಗ್ ಹೃದಯ ಸಂಬಂಧಿ ರೋಗಿಗಳಿಗೆ ಹೃದಯಾಘಾತವಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಅತಿಯಾದ ಚಳಿಯಲ್ಲಿ ವಾಕಿಂಗ್ ಮಾಡುವುದು ಪ್ರಾಣಕ್ಕೆ ಅಪಾಯವನ್ನು ತಂದೊಡ್ಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದ್ದು. ಚಳಿಯ ತೀವ್ರತೆಗೆ ರಕ್ತ ಸಂಚಲನದಲ್ಲಿ ವ್ಯತ್ಯಯವಾಗಿ ಹಾರ್ಟ್ ಆಟ್ಯಾಕ್ ಆಗೋ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದ್ದರಿಂದ ಹೃದಯ ಸಂಬಂಧ ರೋಗಿಗಳು ಅತ್ಯಂತ ಜಾಗರೂಕರಾಗಿ ವೈದ್ಯರ ಸಲಹೆಯ ಮೇರೆಗ ಮನೆಯಲ್ಲಿಯೆ ವ್ಯಾಯಾಮ ಮಾಡುವಂತೆ ಸೂಚನೆ ನೀಡಿದ್ದಾರೆ.
ಅದರಲ್ಲೂ 45 ವರ್ಷ ದಾಟಿದವರಿಗೆ ಅತಿಯಾದ ಚಳಿ ಹೆಚ್ಚು ಅಪಾಯಕಾರಿಯಾಗಿದ್ದು. ಆದ್ದರಿಂದ ಹೃದಯ ಸಂಬಂಧಿ ಕಾಯಿಲೆ ಇರುವವರು ಮನೆಯಲ್ಲಿಯೆ ವ್ಯಾಯಾಮ ಮಾಡುವಂತೆ ವೈದ್ಯರು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.