Wednesday, December 18, 2024

ಸದನದಲ್ಲಿ ಜಿದ್ದಾಜಿದ್ದಿ, ಹೊರಗೆ ಕೂಲ್​ ಕೂಲ್​ : ಜಮೀರ್​ರನ್ನು ಭೇಟಿಯಾದ ಯತ್ನಾಳ್​ !

ಬೆಳಗಾವಿ : ರಾಜಕಾರಣದಲ್ಲಿ ಯಾರು ಸ್ನೇಹಿತರಲ್ಲ, ಯಾರೂ ಶತ್ರುಗಳಲ್ಲ ಎಂಬುದು ಬಹುಷಃ ಸತ್ಯವಾದ ಮಾತೆ ಆಗಿದೆ. ಹೌದು ವಕ್ಷ್​ ವಿಚಾರದಲ್ಲಿ ಹಾವು ಮುಂಗುಸಿಯ ರೀತಿಯಲ್ಲಿ ಟಾಕ್​ ಫೈಟ್​ ಮಾಡುತ್ತಿದ್ದ ಜಮೀರ್​ ಮತ್ತು ಯತ್ನಾಳ್ ಜೊತೆಯಾಗಿ ಕಾಣಿಸಿಕೊಂಡಿದ್ದು. ಜಮೀರ್ ಆಹ್ವಾನದ ಮೇರೆಗೆ ಯತ್ನಾಳ್​ ಜಮೀರ್​ ಅವರ ಕಛೇರಿಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ :

ರಾಜ್ಯದಲ್ಲಿ ಕಳೆದ ತಿಂಗಳು ವಕ್ಷ್ ವಿಚಾರದ​ ಕಾವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿತ್ತು.ಈ ವೇಳೆ ವಕ್ಷ್​ ಆಸ್ತಿಯನ್ನು ಜಮೀರ್ ಆದೇಶದ ಮೇರೆಗೆ ಕಬಳಿಸಲಾಗುತ್ತಿದೆ ಎಂದು ಯತ್ನಾಳ್​ ಅವರು ಜಮೀರ್ ಅವರ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರು. ದಿನ ಪ್ರತಿ ಜಮೀರ್​ಗೆ ಬೈಯುತ್ತಿದ್ದ ಯತ್ನಾಳ್​ ಇಂದು ಜಮೀರ್​ ಅವರ ಕಛೇರಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜಮೀರ್​​ ಊಟಕ್ಕೆ ಆಹ್ವಾನಿಸಿದ್ದ ಹಿನ್ನಲೆ ಬಸನಗೌಡಪಾಟೀಲ್​ ಯತ್ನಾಳ್​ ಇಂದು ಸುವರ್ಣಸೌದದ ಜಮೀರ್​ ಅವರ ಕಛೇರಿಗೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES