ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು. ಪವಿತ್ರಾಗೌಡ, ಪ್ರದೋಶ್, ದರ್ಶನ್ ಸೇರಿದಂತೆ ಕೆಲವು ಆರೋಪಿಗಳು ಈಗಾಗಲೇ ಜೈಲಿನಿಂದ ಹೊರಬಂದಿದ್ದಾರೆ. ಇದರ ನಡುವೆ ಇದೇ ಪ್ರಕರಣದಲ್ಲಿ ಜೈಲು ಸೇರಿರುವ ಅನುಕುಮಾರ್ ಮತ್ತು ಜಗದೀಶ್ ಬೇಲ್ ಸಿಕ್ಕರು ಶ್ಯೂರಿಟಿ ಸಿಗದೆ ಪರದಾಡುವಂತಾಗಿದೆ.
ದರ್ಶನ್ ಮತ್ತು ಪವಿತ್ರಾ ಸೇರಿದಂತೆ ಕೆಲವು ಆರೋಪಿಗಳಿಗೆ ಹಣಕಾಸಿನ ಬಲವಿದೆ. ಇದೇ ಕಾರಣದಿಂದ ಅವರೆಲ್ಲಾ ಜೈಲಿನಿಂದ ಈಗಾಗಲೇ ಹೊರಬಂದಿದ್ದು. ತಮ್ಮ ಸ್ನೇಹಿತರಿಂದ ಶ್ಯೂರಿಟಿನ ನೀಡಿಸಿ ತಮ್ಮ ಐಶಾರಾಮಿ ಜೀವನಕ್ಕೆ ಮರಳಿದ್ದಾರೆ. ಆದರೆ ಕೇವಲ ದರ್ಶನ್ ಮೇಲಿನ ಅಭಿಮಾನಕ್ಕೆ ಕೃತ್ಯದಲ್ಲಿ ಪಾಲ್ಗೊಂಡಿದ್ದ ಕೆಲವು ಅಮಾಯಕರು ಜೈಲಿನಲ್ಲೆ ಕೊಳೆಯುವಂತಾಗಿದೆ.
ಅದರಲ್ಲಿ ಚಿತ್ರದುರ್ಗದ ಅನುಕುಮಾರ್ ಮತ್ತು ಜಗದೀಶ್ ಕೂಡ ಇದ್ದು. ನ್ಯಾಯಾಲಯದಿಂದ ಜಾಮೀನು ದೊರೆತರು ಕೂಡ ಶ್ಯೂರಿಟಿಯನ್ನು ಪೂರ್ಣಗೊಳಿಸದ ಹಿನ್ನಲೆ ಅವರು ಇನ್ನೂ ಕೂಡ ಜೈಲಿನಲ್ಲೆ ಇರುವಂತಾಗಿದೆ. ಮನೆಯಲ್ಲಿ ಬಡತನ ಇರುವುದರಿಂದ ಮನೆಯವರು ಕೂಡ ಇವರನ್ನು ಹೊರಗೆ ಕರೆತರಲು ಎಣಗಾಡುಂತಾಗಿದೆ.