Monday, January 27, 2025

ಶುಂಠಿ ಬೆಲೆಯಲ್ಲಿ ದಿಢೀರ್​ ಕುಸಿತ : ರೈತರು ಕಂಗಾಲು !

ಮಂಡ್ಯ: ಕಳೆದ ಜುಲೈ ತಿಂಗಳಲ್ಲಿ ಬಂಗಾರದ ಬೆಲೆ ಕಂಡು ಶುಂಠಿ ಬೆಳೆಯುವ ರೈತರಿಗೆ ನಿಧಿಯಾಗಿದ್ದ ಹಸಿ ಶುಂಠಿ ಬೆಳೆ.ಈಗ ಏಕಾಏಕಿ ದಿಢೀರ್‌ ಬೆಲೆ ಕುಸಿತದಿಂದ ಲಕ್ಷಾಂತರ ಸಾಲ ಸೂಲ ಮಾಡಿ ಶುಂಠಿ ಬೆಳೆದ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಸಿಲಿಕಿದ್ದಾರೆ.

ಹೌದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ತಾಲೂಕಿನಾದ್ಯಂತ ರೈತರು ಹೆಚ್ಚು ಶುಂಠಿ ಬೆಳೆದಿದ್ದಾರೆ. ಶುಂಠಿ ಬೆಳೆಗೆ ಲಕ್ಷಾಂತರ ರೂ.ಹೂಡಿಕೆ ಮಾಡಿದ್ದ ರೈತರಿಗೆ ದಿಢೀರ್ ಬೆಲೆ ಕುಸಿತ. ಶುಂಠಿ ಬೆಳೆದ ರೈತನಿಗೆ ಬರ ಸಿಡಿಲು ಬಡೆದಂತಾಗಿದೆ .ಐದು ತಿಂಗಳ ಹಿಂದೆಯಷ್ಟೇ 60 ಕೆ.ಜಿ. ಬ್ಯಾಗ್‌ವೊಂದಕ್ಕೆ 5 ರಿಂದ 6 ಸಾವಿರ ರೂ. ಮಾರಾಟವಾಗಿದ್ದ ಶುಂಠಿ, ಪ್ರಸ್ತುತ 1000 ರಿಂದ 1500 ರೂ. ವರೆಗೆ ಮಾರಾಟವಾಗುತ್ತಿದೆ.

ಜುಲೈನಲ್ಲಿ ಕೆ.ಜಿ. ಶುಂಠಿಗೆ 400 ರೂ. ಇದ್ದ ಬೆಲೆ, ಪ್ರಸ್ತುತ 25 ರಿಂದ 30 ರೂ.ಗೆ ಇಳಿಕೆಯಾಗಿದೆ ಹೂಡಿಕೆ ಮಾಡಿದ್ದ ರೈತ ಬಂಡವಾಳವೂ ವಾಪಸ್‌ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ರಲ್ಲಿ 60 ಕೆ.ಜಿ. ಬ್ಯಾಗ್‌ 8 ರಿಂದ 14 ಸಾವಿರ ರೂ.ವರೆಗೆ ಹಳೇ ಶುಂಠಿ ಮಾರಾಟವಾಗಿದ್ದರೆ, 6 ರಿಂದ 8 ಸಾವಿರದ ವರೆಗೆ ಹೊಸ ಶುಂಠಿ ಮಾರಾಟವಾಗಿತ್ತು. ಆರಂಭದಲ್ಲಿ ರೈತರು ಬಿತ್ತನೆ ಶುಂಠಿಯನ್ನು 6 ರಿಂದ 7 ಸಾವಿರ ಕೊಟ್ಟು ಖರೀದಿಸಿ ಬಿತ್ತನೆ ಮಾಡಿದವರಿಗೆ ಹೂಡಿಕೆಯ ಬಂಡವಾಳವೂ ಇಲ್ಲದಂತಾಗಿದೆ. ದರ ಏರುವ ನಿರೀಕ್ಷೆಯಲ್ಲಿರುವ ರೈತರಿಗೆ ವರುಣನ ವಕ್ರ ದೃಷ್ಟಿಗೆ ತುತ್ತಾಗುವ ಆತಂಕ ಮನೆಮಾಡಿದೆ.

ರಾಜ್ಯದ ಮಾರುಕಟ್ಟೆಗಳಲ್ಲಿ ಸೂಕ್ತ ದರ ಸಿಗದಿದ್ದಾಗ ರೈತರ ಬೆಳೆಗಳ ರಕ್ಷಿಸಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆಯು  ಕೆ ಆರ್ ಪೇಟೆಯಲ್ಲಿ ಇಲ್ಲ. ಇದನ್ನೇ ಸುವರ್ಣ ಅವಕಾಶ ಎಂದು ತಿಳಿದು ರೈತರನ್ನ ದಲ್ಲಾಳಿಗಳನ್ನು ಸಂಪರ್ಕಿಸುತ್ತಾರೆ. ಮೊದಲು ಶುಂಠಿ ತರಲು ಹೇಳುವ ದಲ್ಲಾಳಿಗಳು, ರೈತರು ಅಲ್ಲಿಗೆ ಹೋದ ನಂತರ ‘ಕ್ವಾಲಿಟಿ’ ನೆಪ ಹೇಳಿ ಕಡಿಮೆ ದರಕ್ಕೆ ಕೇಳುತ್ತಾರೆ. ವಾಪಾಸ್‌ ತಂದರೆ ಸಾಗಣೆ ವೆಚ್ಚವೂ ದಕ್ಕುವುದಿಲ್ಲ ಎಂದು ರೈತರು ಕೊಟ್ಟು ಬಂದರೆ ತಳಕ್ಕೆ ಬರುವ ದಳ್ಳಾಳಿಗಳು ವಾಚಿಂಗ್ ಶುಂಠಿಗೆ ಒಂದುವರೆ ಸಾವಿರ ಹಾಗೆ ಆದರೆ 1200ರಿಂದ 1300 ರೂ ಗೆ ಖರೀದಿಸಿ ದಲ್ಲಾಳಿಗಳು ಭಾರೀ ಮೋಸಕ್ಕೆ ರೈತರು ತುತ್ತಾಗುತ್ತಿದ್ದಾರೆ. ಲಕ್ಷಾಂತರ ಸಾಲ ಸೂಲಿ ಮಾಡಿ ಉತ್ತಮ ಫಸಲು ಬೆಳೆದರು ಬೆಲೆ ಇಳಿಕೆಯಲ್ಲಿ ದಲ್ಲಾಳಿಗಳು ಹಣ ಮಾಡಲ ಹೊರಟಿರುವುದರಿಂದ ರೈತರು ಕಂಗಾಲಾಗುತ್ತಿದ್ದಾರೆ.

ವರ್ಷದ ಆರಂಭದಲ್ಲಿ ಉತ್ತಮ ಬೆಲೆ ಇದ್ದರೂ, ನಿರೀಕ್ಷೆಗೂ ಮೀರಿದ ಬಿತ್ತನೆ ಪರಿಣಾಮ ಬೆಲೆ ಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ ಇನ್ನಾದರೂ ಸರ್ಕಾರ ಶುಂಠಿ ದಳ್ಳಾಳಿಗಳಿಗೆ ಕಡಿವಾಣ ಹಾಕಿ ಶುಂಠಿ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡಬೇಕಾಗಿದೆ ಎಂದು ರೈತರ ಆಗ್ರವಾಗಿದೆ.

RELATED ARTICLES

Related Articles

TRENDING ARTICLES