Wednesday, April 2, 2025

ರೋರಿಂಗ್​ ಸ್ಟಾರ್​ ಶ್ರೀ ಮುರುಳಿ ಅಭಿನಯದ ಹೊಸ ಸಿನಿಮಾ ಘೋಷಣೆ !

ಸ್ಯಾಂಡಲ್​ವುಡ್​ನ ರೋರಿಂಗ್​​ ಸ್ಟಾರ್ ಖ್ಯಾತಿಯ ಶ್ರೀಮುರಳಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ವಿಶೇಷವಾಗಿ ಬರ್ತ್​ಡೇ ಬಾಯ್​​​ನ ಮುಂದಿನ ಸಿನಿಮಾಗಳು ಅನೌನ್ಸ್​ ಆಗಿವೆ. ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು ಒಂದು ಸಿನಿಮಾವಾದ್ರೆ, ‘ಪರಾಕ್’ ಮತ್ತೊಂದು ಚಿತ್ರ.

ಕನ್ನಡ ಚಿತ್ರರಂಗದ ಬಹುಬೇಡಿಕೆ ನಟನಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀಮುರಳಿ ಅವರು ಇಂದು 43ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಜನಪ್ರಿಯ ತಾರೆಗೆ ಕುಟುಂಬಸ್ಥರು, ಆಪ್ತರು, ಚಿತ್ರರಂಗದವರೂ ಸೇರಿ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಅಭಿಮಾನಿಗಳಿಗೆ ನಟನ ಕಡೆಯಿಂದ ಅವರ ಮುಂದಿನ ಚಿತ್ರಗಳು ಘೋಷಣೆಯಾಗಿವೆ.

ಇದನ್ನೂ ಓದಿ : ಕೆಟ್ಟದ್ದು ಬರೋದೆ ಒಳ್ಳೆ ದಾರಿಲೀ ನಡೆಸೋಕೆ, ದರ್ಶನ್​ರನ್ನು ಭೇಟಿ ಮಾಡುತ್ತೇನೆ : ಶ್ರೀ ಮುರಳಿ

ಅಕ್ಟೋಬರ್​​ ಕೊನೆಗೆ ತೆರೆಕಂಡ ‘ಬಘೀರ’ ನಿರೀಕ್ಷೆಯಂತೆ ಅಭೂತಪೂರ್ವ ಯಶಸ್ಸು ಕಂಡಿದೆ. ಎರಡೂವರೆ ವರ್ಷಗಳ ಗ್ಯಾಪ್​​ ಬಳಿಕ ಬಂದ ರೋರಿಂಗ್ ಸ್ಟಾರ್​ನ ಚಿತ್ರವಿದು. ಬಘೀರನ ಬಳಿಕ ಶ್ರೀಮುರಳಿ ಯಾವ ಸಿನಿಮಾ ಕೈಗೆತ್ತಿಕೊಳ್ಳುತ್ತಾರೆ ಅನ್ನೋ ಕುತೂಹಲ ಅಭಿಮಾನಿಗಳ ಬಳಗದಲ್ಲಿತ್ತು. ಫೈನಲಿ ಇಂದು ಉತ್ತರ ಸಿಕ್ಕಿದೆ. ಎರಡು ಹೊಸ ಸಿನಿಮಾಗಳು ಅಧಿಕೃತವಾಗಿ ಘೋಷಣೆಯಾಗಿವೆ.

‘ಪರಾಕ್’ ಎಂಬ ಶೀರ್ಷಿಕೆಯ ಹೊಸ ಚಿತ್ರ ಅನೌನ್ಸ್​​ ಆಗಿದೆ. ಅಲ್ಲದೇ ಬಿಡುಗಡೆ ದಿನಾಂಕ ಕೂಡಾ ರಿವೀಲ್​ ಆಗಿದೆ. ಪೋಸ್ಟರ್​ನಲ್ಲಿ ಒಂದು ಕೈಯಲ್ಲಿ ಗನ್ ಹಿಡಿದಿದ್ದಾರೆ, ಬೆನ್ನು ತೋರಿಸಿರುವ ಚಿತ್ರದಲ್ಲಿ ನಟ ಬೆನ್ನಿಗೆ ರೈಫಲ್​ ಹಾಕಿ ಕಾಣಿಸಿಕೊಂಡಿದ್ದಾರೆ. 2025ರ ಡಿಸೆಂಬರ್​ನಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES