ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಬೇಲ್ ಪಡೆದು ಇಂದು ಬೆಳಿಗ್ಗೆ ಹೊರಬಂದಿದ್ದು. ಜೈಲಿನಿಂದ ಹೊರಬರುತ್ತಲೆ ಪರಪ್ಪನ ಅಗ್ರಹಾರ ಕಾರಗೃಹದ ಆರವರಣದಲ್ಲಿರುವ ಮುನೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪವಿತ್ರಾ ಗೌಡ ಇಂದು ಜೈಲಿನಿಂದ ಹೊರಬಂದಿದ್ದು. ಸುಮಾರು 7 ತಿಂಗಳ ಜೈಲು ವಾಸವನ್ನು ಅಂತ್ಯಗೊಳಿಸಿ ಬೇಲ್ ಪಡೆದು ಹೊರಬಂದಿದ್ದಾರೆ. ಜಾಮೀನು ದೊರೆತು 3 ದಿನ ಕಳೆದರು, ಜಾಮೀನು ಪ್ರಕ್ರಿಯೆ ಮುಗಿಸಲು ಸಮಯ ಇಡಿದ ಕಾರಣ ಇಂದು ಹೊರಬಂದಿದ್ದಾರೆ.
ಪವಿತ್ರ ಗೌಡ ಹೊರಬರುತ್ತಲೆ ಪವಿತ್ರಾರ ತಾಯಿ ಭಾಗ್ಯ ದೇವಾಲಯದಲ್ಲಿ ಪ್ರಾಥನೆ ಸಲ್ಲಿಸಿದ್ದು. ಪವಿತ್ರಾಳಿಗಿ ನಿಂಬೆಹಣ್ಣಿನಿಂದ ದೃಷ್ಟಿಯನ್ನು ತೆಗೆದು ಮಗಳಿಗೆ ಆರೈಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗುತ್ತಲೆ ಪವಿತ್ರಾ ತಮ್ಮ ತಾಯಿಯ ಮನೆ ತಲಘಟ್ಟಪುರಕ್ಕೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.