ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು. ಹೊಸ ವರ್ಷದ ಹಿನ್ನಲೆಯಲ್ಲೆ ಸುಮಾರು 24 ಕೋಟಿ ಮೌಲ್ಯದ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಸ ವರ್ಷಧ ಹೊತ್ತಲ್ಲಿ ಸಿಸಿಬಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ನಡೆದಿದ್ದು. ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿಯ ಮೇಲೆ ದಾಳಿ ನಡೆಸಿದ ಪೊಲೀಸರು ಓರ್ವ ನೈಜೀರಿಯನ್ ಮಹಿಳೆ ಮತ್ತು ಹಳದಿ ಮತ್ತು ಬಿಳಿ ಬಣ್ಣದ ಎಂಡಿಎಂ ಕ್ರಸ್ಟಲ್ ಗಾಂಜವನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಮಾರು 24 ಕೋಟಿ ಮೌಲ್ಯದ 13 ಕೆಜಿ ಗಾಂಜವನ್ನು ವಶಪಡಿಸಿಕೊಂಡಿದ್ದು, ಮಹಿಳೆಯ ಬಳಿಯಲ್ಲಿ ಸುಮಾರು 70 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ವಿಜಯೇಂದ್ರ-ಯತ್ನಾಳ್ ಫ್ರೆಂಡ್ಶಿಪ್ : ಸದನದಲ್ಲಿ ಪರಸ್ಪರ ಕೈಮುಗಿದುಕೊಂಡ ರೆಬಲ್ಸ್
ಮಹಿಳೆ ಮುಂಬೈನಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ತಂದು ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದಳು. ಖಚಿತ ಮಾಹಿತಿ ಮೇರೆಗೆ ದಾಳಿ ಪೊಲೀಸರು ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಿಳೆಯ ಮೇಲೆ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.