Thursday, December 19, 2024

‘ಒನ್​ ನೇಷನ್​, ಒನ್​ ಎಲೆಕ್ಷನ್​’ ಮಸೂದೆ ಮಂಡನೆಗೆ ಕ್ಷಣಗಣನೆ ಆರಂಭ !

ದೆಹಲಿ: ಮೋದಿ ಸರ್ಕಾರದ ಮಹತ್ವದ ಯೋಜನೆಯಾದ ‘ಒನ್​ ನೇಶನ್​, ಒನ್​ ಎಲೆಕ್ಷನ್’​ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಮಂಡನೆ ಮಾಡಲಿದ್ದು. ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಪ್ರಶ್ನಾವಳಿಯ ಅವಧಿ ಮುಗಿದ ನಂತರ ಈ ಮಸೂದೆಯನ್ನು ಮಂಡನೆ ಮಾಡಲಿದ್ದು. ಈ ಮಸೂದೆಯನ್ನು ಮಂಡನೆ ಮಾಡುವ ಮೊದಲೆ ಕಾಂಗ್ರೆಸ್​ನಿಂದ ಅಪಸ್ವರ ಶುರುವಾಗಿದೆ. ವಿಪಕ್ಷಗಳ ಸರ್ವಪಕ್ಷ ಸಭೆ ಕರೆದು ಮೊದಲು ಚರ್ಚೆ ಮಾಡಿ ನಂತರ ಇಂತಹ ನಿರ್ಧಾರ ಕೈಗೊಳ್ಳಬೇಕಿತ್ತು ಎಂದು ಹೇಳಿದ್ದಾರೆ.

ಬಿಜೆಪಿಯವರು ಸರ್ವಾಧಿಕಾರಿಗಳ ರೀತಿಯಲ್ಲಿ ವರ್ತಿಸುತ್ತಿವೆ ಎಂದು ಆರೋಪಿಸಿರುವ ಕಾಂಗ್ರೆಸ್​ ‘ ಮೊದಲು ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಯೋಜನೆ ತರಲು ಹೊರಟ್ಟಿದ್ದಾರೆ. ನಂತರ ಒಂದು ರಾಷ್ಟ್ರ, ಒಬ್ಬ ನಾಯಕ ಎಂಬ ಯೋಜನೆ ತರುತ್ತಾರೆ. ಆದರೆ ಕಾಂಗ್ರೆಸ್​ ಅವರ ಯೋಜನೆಯನ್ನು ಸಫಲವಾಗಲು ಬಿಡುವುದಿಲ್ಲ. ಬಿಜೆಪಿಯವರು ಹಣದುಬ್ಬರ & ನಿರುದ್ಯೋಗದಂತಹ ಸಮಸ್ಯೆಗಳ ಗಮನವನ್ನು ಬೇರೆಡೆಗೆ ತಿರುಚುವುದ್ದಕ್ಕಾಗಿ ಇಂತಹ ಯೋಜನೆ ತರುತ್ತಿದ್ದಾರೆ ಎಂದು ವಿಪಕ್ಷ ಮುಖಂಡರು ದೂಷಿಸುತ್ತಿದ್ದಾರೆ.

RELATED ARTICLES

Related Articles

TRENDING ARTICLES