Wednesday, January 22, 2025

ಕಾಂಗ್ರೆಸ್​ನವರಿಗೆ ಈಗ ಸಿಬಿಐ ಮೇಲೆ ವಿಶ್ವಾಸ ಬಂದಿದೆ : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್​ ಈಶ್ವರಪ್ಪ ರಾಜ್ಯ ಕಾಂಗ್ರೆಸ್​ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ಅನ್ವರ್​ ಮಾಣಪ್ಪಾಡಿ ವರದಿಯನ್ನು ಕಾಂಗ್ರೆಸ್​ ಸಿಬಿಐಗೆ ವಹಿಸಲಿ. ಅದರಲ್ಲಿರುವ ವರದಿಯನ್ನು ಬಹಿರಂಗಗೊಳಿಸಲಿ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ’ ರಾಜ್ಯದ ಮಠ, ಮಂದಿರ, ರೈತರ ಜಮೀನುಗಳಿನ್ನು ವಕ್ಷ್​ ಹೆಸರಿನಲ್ಲೆ ಇದೆ. ವಕ್ಫ್ ಆಸ್ತಿಯನ್ನು ಅನೇಕ ರಾಜಕೀಯ ನಾಯಕರು ವಶ ಪಡಿಸಿಕೊಂಡಿದ್ದಾರೆ ಎಂಬುದು ಅನ್ವರ್ ಮಾಣಿಪ್ಪಾಡಿ ಅವರ ವರದಿಯಲ್ಲಿ ಬಹಿರಂಗವಾಗಿದೆ. ಸಾವಿರಾರು ಎಕರೆ ಜಮೀನನ್ನು ರಾಜಕಾರಣಿಗಳು‌ ನುಂಗಿ‌ನೀರು ಕುಡಿದಿದ್ದಾರೆ. ಅದಕ್ಕೆ ಅವರ ವರದಿ ಕುರಿತು ಚರ್ಚೆ ನಡೆಸುತ್ತಿಲ್ಲ ಎಂದು ಹೇಳಿದರು.

ವಿಜಯೇಂದ್ರ ಅನ್ವರ್​ ಮಾಣಪ್ಪಾಡಿ ಅವರಿಗೆ 150 ಕೋಟಿ ಲಂಚದ ಆಮಿಷ ಮಾಡಿದ್ದರು ಎಂಬ ಸಿದ್ದರಾಮಯ್ಯರ ಆರೋಪದ ಬಗ್ಗೆ ಮಾತನಾಡಿದ ಈಶ್ವರಪ್ಪ ‘ವಿಜಯೇಂದ್ರ ಅವರು ಅನ್ವರ್ ಮಾಣಿಪ್ಪಾಡಿ‌ ಅವರ ಬಳಿ ಹೋಗಿ ಈ ವರದಿ ಬಿಡದಂತೆ ಹೇಳಿದ್ದಾರೆ ಎಂಬ ಸಿಎಂ ಹೇಳಿಕೆ ಅಚ್ಚರಿ ಮೂಡಿಸಿದೆ. ಸಿಎಂ ಅವರು ಇದರ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಬೇಕು. ರಾಜ್ಯದ ಮುಖ್ಯಮಂತ್ರಿ ಮೇಲೆ ಗುರುತರ ಆರೋಪ ಬಂದಿದೆ.
ಮುಡಾ ಸೇರಿ ಹಲವು ಗುರುತರ ಆರೋಪ ಇದೆ. ಅನ್ವರ್ ಮಣಪ್ಪಾಡಿ ವರದಿ ಹಾಗೆ ಇದೆ. ಇದರ ವರದಿ ಇನ್ನ ಬಹಿರಂಗವಾಗಿಲ್ಲ, ವರದಿಯಲ್ಲಿ ಅನೇಕ ಕಾಂಗ್ರೆಸ್ ನಾಯಕರು ಹೆಸರು ಇವೆ. ಅನ್ವರ್ ಮಾಣಪ್ಪಾಡಿ ವರದಿ ಚರ್ಚೆಗೆ ಬರಲಿ, ಅವಾಗ ಯಾರ ಲೂಟಿ ಮಾಡಿದಾರೆ ಅವರ ಹೆಸರು ಬರುತ್ತೆ ಎಂದು ಹೇಳಿದರು.

ಕಾಂಗ್ರೆಸ್​ನವರು 150 ಕೋಟಿ ಆಮಿಷ ನೀಡಿದ ಆರೋಪ ಮಾಡಿದ್ದಾರೆ. ಆದರೆ ಅನ್ವರ್ ಮಾಣಪ್ಪಾಡಿ ತಮ್ಮ ಹೇಳಿಕೆ ಬದಲಿಸಿದ್ದಾರೆ. ವಿಜಯೇಂದ್ರ ನಮ್ಮ ಮನೆಗೆ ಬಂದಿಲ್ಲ ಅವರು ಬಿಜೆಪಿ ಕಚೇರಿಗೆ ಕರೆಸಿ ನನ್ನ ಜೊತೆ ಮಾತನಾಡಿದ್ದರು ಎಂದು ಹೇಳಿದ್ದರು. ಆಗ ತಮಾಷೆಗೆ ಕಾಂಗ್ರೆಸ್ ನವರು ದುಡ್ಡು ಕೊಟ್ರೆ ತೊಗೊಳಿ ಎಂದಿದ್ದರು ಎಂದು ಹೇಳಿದ್ದರು. ಈಗ ಇದನ್ನೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದಾರೆ. ಆದರೆ ಇದು ಬಹಳ ಗಂಭೀರವಾದ ವಿಚಾರವಾಗಿದೆ ಎಂದು ಹೇಳಿದರು.

ಕಾಂಗ್ರೆಸ್​ಗೆ ಸಿಬಿಐ ಮೇಲೆ ಮೋಹ ಬಂದಿದೆ !

ಕಾಂಗ್ರೆಸ್​ ನಾಯಕರು ಈಗ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಹೇಳುತ್ತಿದ್ದಾರೆ. ಇವರಿಗೆ ಸಿಬಿಐ ಮೇಲೆ ಮೋಹ ಬಂದಿರುವುದು ಒಳ್ಳೆಯದು, ತನಿಖೆಯನ್ನು ಸಿಬಿಐಗೆ ಕೊಡಿ, ಸಿಬಿಐಗೆ ಕೊಡಿ ಎನ್ನುತ್ತಿದ್ದಾರೆ
ಆದರೆ ಸಿಬಿಐಗೆ ತನಿಖೆಗೆ ಕೊಡುವವರು ಯಾರು ? ಕಾಂಗ್ರೆಸ್​ನವರೆ ಕೊಡಬೇಕು ಅಲ್ವಾ !

ಹಿಂದೆ ಕಾಂಗ್ರೆಸಿಗರಿಗೆ ಸಿಬಿಐ ಮೇಲೆ ವಿಶ್ವಾಸವಿರಲಿಲ್ಲ ಆದರೆ ಈಗ ಸಿಬಿಐ ಮೇಲೆ ವಿಶ್ವಾಸ ಬಂದಿದೆ. ಅದಕ್ಕೆ
150 ಕೋಟಿ ಆಫರ್ ಮಾಡಿರುವ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಬೇಕು. ರಾಜ್ಯ ಸರ್ಕಾರ ಇನ್ನು ಪಹಣಿಯಲ್ಲಿ ನೊಂದಣಿಯಾಗಿರುವ ವಕ್ಷ್​ ಹೆಸರನ್ನು ತೆಗೆದಿಲ್ಲ. ಆದರೆ ಮಠ, ಮಂದಿರ, ದೇವಸ್ಥಾನ, ರೈತರ ಜಮೀನು ಯಾವುದೇ ಕಾರಣಕ್ಕೂ ವಕ್ಷ್​​ ಆಸ್ತಿಯಾಗಲೂ ನಾವು ಬಿಡೋದಿಲ್ಲ ಎಂದು ಹೇಳಿದರು.

ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ !

ಮುಂದುವರಿದು ಮಾತನಾಡಿದ ಕೆ.ಎಸ್​ ಈಶ್ವರಪ್ಪ ‘ ಈ ಬಾರಿಯ ಅಧಿವೇಶದಿಂದ ರಾಜ್ಯದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ‌, ರಾಜ್ಯದಲ್ಲಿ ಸರ್ಕಾರ ಇದೆಯೋ ಸತ್ತಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಗುಂಡಿ ಇದೆಯೋ ಅಥವಾ ಗುಂಡಿಯಲ್ಲಿ ರಸ್ತೆ ಇದೆಯೋ ಅದು ತಿಳಿಯುತ್ತಿಲ್ಲ. ಇಲ್ಲಿಯವರೆಗೂ ನಯ ಪೈಸೆ ಕಾಮಗಾರಿಗಳು ನಡೆಯುತ್ತಿಲ್ಲ.

ಶಿವಮೊಗ್ಗದಲ್ಲೂ ಯಾವುದೇ ಒಂದು ಕಾಮಗಾರಿ ನಡೆಯುತ್ತಿಲ್ಲ. ಆಶ್ರಯ ಮನೆ ವಿಚಾರದಲ್ಲಿ ಜನರ ಶಾಪ ಸರ್ಕಾರಕ್ಕೆ ತಟ್ಟಲಿದೆ. ಉಸ್ತುವಾರಿ ಸಚಿವರುಗಳು ಕೇವಲ 15 ಕೋಟಿ ತರಲು ಹೆಣಗಾಡುತ್ತಿದ್ದಾರೆ ಎಂದರೆ ಸರ್ಕಾರ ಬದುಕಿದ್ಯಾ?ಅದರಲ್ಲೂ ಶಿವಮೊಗ್ಗ ನಗರ ಪಾಲಿಕೆಯನ್ನು ಭಗವಂತೆನೇ ಕಾಪಾಡಬೇಕು. ರಸ್ತೆ ಇಲ್ಲ, ನೀರಿನಿಲ್ಲ, ಈಸ್ವತ್ತು ಪಡೆಯಲು ಜನರ ಪರದಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಪಾಲಿಕೆ‌ಗೆ ಮುತ್ತಿಗೆ ಹಾಕಬೇಕಾಗುತ್ತದೆ‌ ಎಂದು ಎಚ್ಚರಿಕೆ ನೀಡಿದರು.

RELATED ARTICLES

Related Articles

TRENDING ARTICLES