ಮುಂಬೈನ : ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಯತ್ನಾಳ್ ಅವರ ತಂಡ ಭೇಟಿಯಾಗಿದ್ದು. ಮಹರಾಷ್ಟ್ರದ ನಾಗಪುರದ ಖಾಸಗಿ ನಿವಾಸದಲ್ಲಿ ಫಡ್ನವೀಸ್ರನ್ನು ಭೇಟಿಯಾದ ರಮೇಶ್ ಜಾರಕಿಹೋಳಿ ಅವರಿಗೆ ಮೈಸೂರು ಪಾಕ್ ತಿನ್ನಿಸಿ ಶುಭಕೋರಿದರು.
ಮಹರಾಷ್ಟ್ರದ ಚುನಾವಣೆಯಲ್ಲಿ ಈ ಬಾರಿ ಮಹಾಯುತಿ ಮೈತ್ರಿ ಕೂಟ ಭಾರಿ ಬಹುಮಕತದೊದಿಗೆ ಅಧಿಕಾರ ಹಿಡಿಯುವಲ್ಲಿ ಸಫಲವಾಗಿದ್ದು. ನೆನ್ನೆ ಕ್ಯಾಬಿನೇಟ್ ರಚನೆಯಾಗಿ ಮೈತ್ರಿ ಕೂಟಗಳು ಸಚಿವ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಇದರ ಹಿನ್ನಲೆಯಲ್ಲೆ ಮಹರಾಷ್ಟ್ರದ ನಾಗಪುರ ನಿವಾಸದಲ್ಲಿ ಫಡ್ನವೀಸ್ರನ್ನು ಭೇಟಿಯಾದ ರಮೇಶ್ ಜಾರಕಿಹೋಳಿ ಅವರಿಗೆ ಮೈಸೂರು ಪೇಟ, ಶ್ರೀಗಂಧದ ಹಾರ ಹಾಕಿ ಸನ್ಮಾನಿಸಿ, ಮೈಸೂರ್ ಪಾಕ್ ಸಿಹಿ ನೀಡಿ ಅಭಿನಂದಿಸಿದರು. ಈ ವೇಳೆ ಮಾಜಿ ಸಚಿವರು, ಶಾಸಕರೂ ಆದ ಮಾಜಿ ಸಚಿವ ಶ್ರೀಮಂತ ಪಾಟೀಲ್, ಮುಖಂಡರಾದ ಅಪ್ಪಾ ಸಾಹೇಬ್ ಅವತಾಳೆ, ಎನ್.ಆರ್ ಸಂತೋಷ್, ಭರತ್ ಮುಗದೂರ್ ಮತ್ತು ಉದ್ಯಮಿ ಸುಶಾಂತ್ ಪಾಟೀಲ್ ಉಪಸ್ಥಿತರಿದ್ದರು.