ಚೆನೈ: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಕಿರೀಟವನ್ನು ಗೆದ್ದು ಸಿಂಗಾಪುರದಿಂದ ಸ್ವದೇಶಕ್ಕೆ ಮರಳಿದ ಗುಕೇಶ್ ದೊಮ್ಮರಾಜು ಅವರನ್ನು ಸ್ವಾಗತಿಸಲು ಸೋಮವಾರ ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು.
ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಎಂಬ ಕೀರ್ತಿಗೆ ಭಾಜನರಾಗಿರುವ ಗುಕೇಶ್ ದೊಮ್ಮರಾಜು. ಕಳೆದ ಗುರುವಾರ ಚೀನಾದ ಆಟಗಾರನನ್ನು ಸೋಲಿಸುವ ಮೂಲಕ ಈ ಗೌರವಕ್ಕೆ ಭಾಜನರಾಗಿದ್ದರು. ಈ ಮೂಲಕ ರಷ್ಯಾದ ಗ್ಯಾರಿ ಕಾಸ್ಪರೋವ್ ಎಂಬುವವರ ದಾಖಲೆಯನ್ನು ಮುರಿದು ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್ ಎಂಬ ಗೌರವಕ್ಕೆ ಭಾಜನರಾದರು.
18 ವರ್ಷ ವಯಸ್ಸಿನವರು ವಿಶ್ವನಾಥನ್ ಆನಂದ್ ನಂತರ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಎರಡನೇ ಭಾರತೀಯ ಎಂಬ ಗೌರವಕ್ಕೆ ಗುಕೇಶ್ ಪಾತ್ರರಾಗಿದ್ದಾರೆ. ಡಿ.ಗುಕೇಶ್ ಅವರನ್ನು ತಮಿಳುನಾಡಿನ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರದ (ಎಸ್‌ಡಿಎಟಿ) ಅಧಿಕಾರಿಗಳು ಮತ್ತು ನಗರದ ಚೆಸ್ ಚಾಂಪಿಯನ್‌ಗಳ ಪ್ರಮುಖ ಕೇಂದ್ರವಾದ ಹೆಸರಾಂತ ವೇಲಮ್ಮಾಳ್ ವಿದ್ಯಾಲಯದ ವಿದ್ಯಾರ್ಥಿಗಳು ಅಭಿನಂದಿಸಿದರು.
ಗುಕೇಶ್ರನ್ನು ಸ್ವಾಗತಿಸಲು ಸಾವಿರಾರು ಜನ ಏರ್ಪೋಟ್ ಬಳಿ ಜಮಾಯಿಸಿದ್ದು. ಹಲವಾರು ವಿಧ್ಯಾರ್ಥಿಗಳು ಗುಕೇಶ್ ಅವರ ಬ್ಯಾನರ್ ಹಿಡಿದು ಅವರನ್ನು ಸ್ವಾಗತಿಸಿದರು.