ಕೋಲಾರ : ಔಷದಿ ಅಂಗಡಿಯವನ ಎಡವಟ್ಟಿಗೆ ಸುಮಾರು 36 ಕುರಿಗಳು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದ್ದು. ಕುರಿಗಳನ್ನು ಕಳೆದುಕೊಂಡ ರೈತ ಈರಣ್ಣ ಕಂಗಾಲಾಗಿದ್ದಾರೆ.
ಪಶುವೈದ್ಯ ಬರೆದುಕೊಟ್ಟ ಔಷದಿಯನ್ನು ತೆಗೆದುಕೊಳ್ಳಲು ರೈತ ಈರಣ್ಣ ಔಷದಿ ಅಂಗಡಿಗೆ ಹೋಗಿದ್ದಾನೆ. ಆದರೆ ಔಷದಿ ಅಂಗಡಿಯವನು ಪಶು ವೈದ್ಯ ಬರೆದ ಔಷದಿ ಬದಲಿಗೆ ಬೇರೆ ಔಷದಿ ನೀಡಿದ್ದಾನೆ. ಇದನ್ನು ತಿಳಿಯದ ರೈತ ಈರಣ್ಣ ಔಷದಿಯನ್ನು ಕುರಿಗಳಿಗೆ ನೆನ್ನೆ ರಾತ್ರಿ ನೀಡಿದ್ದಾನೆ.
ಔಷದಿ ನೀಡುತ್ತಿದ್ದಂತೆ ಕುರಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು. ನೆನ್ನೆ ರಾತ್ರಿ ಇಂದಲೂ ಕುರಿಗಳು ನಿರಂತರವಾಗಿ ಸಾಯುತ್ತಿವೆ ಎಂದು ತಿಳಿದು ಬಂದಿದೆ. ಕುರಿಗಳ ಸಾವನ್ನು ಕಂಡು ರೈತ ಈರಣ್ಣ ಕಂಗಾಲಾಗಿದ್ದು. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ಮಾಹಿತಿ ದೊರೆತಿದೆ.