ತುಮಕೂರು: ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರತಾಪ್ಗೆ ತುಮಕೂರು ನ್ಯಾಯಾಲಯ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದು. ಸೋಡಿಯಂ ಮೆಟಲ್ ಅನ್ನು ನೀರಿನಲ್ಲಿ ಎಸೆದು ಸ್ಪೋಟಿಸಿದ್ದ ಪ್ರಕರಣದಲ್ಲಿ ಜೈಲು ವಾಸ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಪ್ರತಾಪ್ ಭಾರಿ ಪ್ರಮಾಣದ ಸೋಡಿಯಂ ಮೆಟಲ್ ಅನ್ನು ನೀರಿನಲ್ಲಿ ಎಸೆದು ಭಾರಿ ಸ್ಪೋಟ ಮಾಡಿದ್ದರು. ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಇದಕ್ಕೆ ಪ್ರಾಣಿ ಪ್ರಿಯರು ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮತ್ತು ಇದರ ಕುರಿತು ಮಧುಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಇದನ್ನೂ ಓದಿ :ಸಲೂನ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದವರ ಹೆಡೆಮುರಿ ಕಟ್ಟಿದ ಪೊಲೀಸರು !
ಇದರ ನ್ಯಾಯಾಲಯದಿಂದ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು. ಪ್ರತಾಪ್ನನ್ನು ಕರೆದುಕೊಂಡು ಅನೇಕ ಸ್ಥಳಗಳಲ್ಲಿ ಮಹಜರು ಮಾಡಿದ್ದರು. ವಿಚಾರಣೆಯನ್ನು ಪೂರ್ಣಗೊಳಿಸಿದ್ದ ಪೊಲೀಸರು ಇಂದು ಪ್ರತಾಪ್ನನ್ನು ಮಧುಗಿರಿ ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದ್ದು. ಪ್ರತಾಪ್ಗೆ ಇಂದಿನಿಂದ 10 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಡಿಸೆಂಬರ್ 26ರವರೆಗೂ ಡ್ರೋನ್ಗೆ ಜೈಲು ಖಾಯಂ ಆದಂತಾಗಿದೆ.