ಗದಗ : ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಮಹಿಳೆಯರನ್ನು ಸ್ವಾವಲಂಭಿಗಳಾಗಿ ಮಾಡಿದೆ ಎಂಬುದಕ್ಕೆ ಈ ವರದಿ ಉದಾಹರಣೆಯಾಗಿದ್ದು, ಗದಗದ ಮಹಿಳೆಯರು ಗೃಹಲಕ್ಷ್ಮಿ ಹಣದಲ್ಲಿ ಕೊಳೆವೆ ಬಾವಿ ಕೊರೆಸುವ ಮೂಲಕ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.
ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಾಲಧಾರ ಓಣಿಯ ನಿವಾಸಿಗಳಾದ ಅತ್ತೆ ಮಾಬುಬೀ, ಸೊಸೆ ರೋಷನ್ ಬೇಗಂ ಎಂಬುವವರು ಬೋರ್ವೆಲ್ ಕೊರೆಸಿದ್ದು. ಗೃಹಲಕ್ಷ್ಮಿ ಯೋಜನೆಯಲ್ಲಿ ತಮಗೆ ಬಂದ ಸುಮಾರು 44 ಸಾವಿರ ಹಣವನ್ನು ಕೂಡಿಟ್ಟು ಬೋರ್ವೆಲ್ ಕೊರೆಸಲು ನೀಡಿದ್ದಾರೆ.
ಬೋರ್ವೆಲ್ ಕೊರೆಸಲು ಒಟ್ಟು 60 ಸಾವಿರ ಹಣ ಖರ್ಚಾಗಿದ್ದು. ಇದಕ್ಕೆ ಅತ್ತೆ ಸೊಸೆ ಒಟ್ಟು 44 ಸಾವಿರ ಹಣವನ್ನು ನೀಡಿದ್ದಾರೆ. ಉಳಿದ 16 ಸಾವಿರ ಹಣವನ್ನು ಅವರ ಮಗ ಹೊಂದಿಸಿ ಕೊಳವೆ ಬಾವಿ ಕೊರೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆಯು ಎರಡು ಬಾರಿ ಬೋರ್ವೆಲ್ ಕೊರೆಸಿದ್ದರು. ಆದರೆ ನೀರು ಬಂದಿರಲಿಲ್ಲ ಎಂದು ಮಾಹಿತಿ ದೊರೆತಿದೆ.
ಆದರೆ ಗೃಹಲಕ್ಷ್ಮಿ ಯೋಜನೆಯ ಹಣದಲ್ಲಿ ಈ ಬಾರಿ ಬೋರ್ವೆಲ್ ಕೊರೆಸಿದ್ದು.ಸುಮಾರು 1.5 ಇಂಚು ನೀರು ಬಂದಿದೆ. ಒಟ್ಟಿನಲ್ಲಿ ಸಿದ್ದರಾಮಯ್ಯ ನೀಡಿದ ಗೃಹಲಕ್ಷ್ಮಿ ಹಣಕ್ಕೆ ಭಗೀರತಿ ಹೊಲಿದು ಬಂದಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿರುವ ಮಹಿಳೆಯರು ಸಿದ್ದರಾಮಯ್ಯರಿಗೆ ಕೃತಜ್ಙತೆ ಸಲ್ಲಿಸಿದ್ದಾರೆ.