ಬೆಳಗಾವಿ: ರಾಜ್ಯದಲ್ಲಿರುವ ಕಾರಗೃಹಗಳು ನಿಜವಾಗಿಯೂ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುತ್ತಿವೆಯ ಅಥವಾ ರೆಸಾರ್ಟ್ ರೀತಿಯಲ್ಲಿ ಅವರಿಗೆ ಐಷಾರಾಮಿ ಜೀವನವನ್ನು ಕಲ್ಪಿಸುತ್ತಿವೆಯ ಎಂಬ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿವೆ. ಇದಕ್ಕೆ ಪುಷ್ಟಿ ಎಂಬಂತೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಗಾಗಿ ಗಲಾಟೆಯಾಗಿದ್ದು. ಕೈದಿಯೊಬ್ಬ ಜೈಲಾಧಿಕಾರಿಯ ಮೇಲೆಯೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾಗಾಗಿ ಗಲಾಟೆ ನಡೆದಿದ್ದು. ಗಾಂಜಾ ಸಲುವಾಗಿ ಸಹಾಯಕ ಜೈಲರ್ ಜಿ.ಆರ್ ಕಾಂಬಳೆ ಮೇಲೆ ಹಲ್ಲೆಯಾಗಿದೆ ಎಂದು ತಿಳಿದು ಬಂದಿದೆ. ಜೈಲಿನಲ್ಲಿರುವ ಗಾಂಜಾ ಕಿಂಗ್ ಪಿನ್ ವಿಚಾರಣಾಧೀನ ಕೈದಿ ಶಾಹೀದ್ ಖುರೇಶಿಯಿಂದ ಮಾರಣಾಂತಿಕ ಹಲ್ಲೆಯಾಗಿದ್ದು. ಡಿ.11ರಂದು ಸಂಜೆ ವೇಳೆ ಜೈಲಿನಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ. ಅಧಿವೇಶನ ಹಿನ್ನೆಲೆ ಪ್ರಕರಣ ಮುಚ್ಚಿ ಹಾಕಲು ಜೈಲು ಅಧಿಕಾರಿಗಳು ಯತ್ನಿಸಿದ್ದರು ಎಂದು ತಿಳಿದು ಬಂದಿದೆ.
ಏನಿದು ಘಟನೆ ?
ಸಹಾಯಕ ಜೈಲರ್ ಜಿ.ಆರ್ ಕಾಂಬಳೆ ಬ್ಯಾರೆಕ್ನಲ್ಲಿ ರೌಂಡ್ಸ್ ಮಾಡುವ ವೇಳೆ ಶಾಹಿದ್ ಖುರೇಶಿ ಕೈಯಲ್ಲಿ ಪ್ಲಾಸ್ಟಿಕ್ ಸುತ್ತಿದ್ದ ಕವರ್ ಪತ್ತೆಯಾಗಿದೆ. ಈ ವೇಳೆ ಅನುಮಾನಗೊಂಡ ಜೈಲಾಧಿಕಾರಿ ಆತನ ಕೈಯಲ್ಲಿದ್ದ ಪ್ಲಾಸ್ಟಿಕ್ ಕವರ್ ಕಿತ್ತಿಕೊಂಡು ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಕೋಪಗೊಂಡ ಕೈದಿ ಖುರೇಶಿ ಜೈಲರ್ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು. ಗಾಂಜಾ ಪ್ಯಾಕೆಟ್ನ್ನು ಜೈಲಿನಿಂದ ಹೊರಕ್ಕೆ ಎಸೆದಿದ್ದಾನೆ.
ಸಹಾಯಕ ಜೈಲರ್ ತೀವ್ರವಾಗಿ ಗಾಯಗೊಂಡ ಜೈಲು ವೈದ್ಯಾಧಿಕಾರಿಗಳಿಂದ ವಿಷಯ ಬೆಳಕಿಗೆ ಬಂದಿದ್ದು. ಹಲ್ಲೆ ಮಾಡಿದ ಕೈದಿ ಶಾಹೀದ್ ಖುರೇಶಿ ವಿರುದ್ಧ ಮುಖ್ಯ ಅಧೀಕ್ಷಕ ಕೃಷ್ಣಮೂರ್ತಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಬಿಎನ್‌ಎಸ್ ಕಾಯ್ದೆ 132, 115(2), 352 ಮತ್ತು ಎನ್‌ಡಿಪಿಎಸ್ ಕಾಯ್ದೆ 42 ಅಡಿಯಲ್ಲಿ ಕೇಸ್ ದಾಖಲಾಗಿದ್ದು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಆರಂಭಗೊಂಡಿದೆ ಎಂದು ತಿಳಿದು ಬಂದಿದೆ.