Wednesday, January 22, 2025

ಪವಿತ್ರಾ ಅಭಿನಯದ ‘ಛತ್ರಿಗಳು ಸಾರ್​ ಛತ್ರಿಗಳೂ’ ಸಿನಿಮಾ ನೋಡಿದ್ದೇನೆ ! ಭಾಗ-04

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನು ಪಡೆದಿರುವ ಪವಿತ್ರಾ ಗೌಡಳ ಮಾಜಿ ಗಂಡ ಸಂಜಯ್​ ಸಿಂಗ್​ ಪವರ್​ ಟಿ.ವಿ ಯೊಂದಿಗೆ ಎಕ್ಷ್​ಕ್ಲೂಸಿವ್​ ಆಗಿ ಮಾತನಾಡಿದ್ದು. ಡಿವೋರ್ಸ್​ ಆದ ನಂತರ ಅವರ ಜೀವನ, ಹೆಂಡತಿ ಮತ್ತು ಮಗಳ ಮೇಲಿ ಇದ್ದ ಕನಸನ್ನು ಬಿಚ್ಚಿಟ್ಟಿದ್ದಾರೆ.

ನನ್ನ ಮಗಳು ರೈಟರ್​ ಆಗಬೇಕು ಎಂದು ಹೇಳುತ್ತಾಳೆ !

ಪವರ್​ ಟಿವಿಯೊಂದಿಗೆ ಮಾತನಾಡಿದ ಸಂಜಯ್​ ಸಿಂಗ್​ ಡಿವೋರ್ಸ್​ ನಂತರದಲ್ಲಿ ನನ್ನ ಮಗಳನ್ನು ಒಂದೆರಡು ಬಾರಿ ಭೇಟಿಯಾಗಿದ್ದೆ. ಅವಳ ಬಳಿ ಕೇಳಿದಾಗ ಅವಳು ಆಕೆಯ ತಾಯಿಯ ಆಗೆ ಆ್ಯಕ್ಟರ್​ ಆಗದೆ ರೈಟರ್​ ಆಗಬೇಕು ಎಂದು ಹೇಳಿದಳು . ಅತ್ತೆ ಮನೆಗೆ ಹೋಗಿದ್ದಾಗ ಆಕೆಯ ಬಳಿ ಇದನ್ನು ಕೇಳಲು ಅವಕಾಶ ಸಿಕ್ಕಿತ್ತು. ಅಂದು ನನ್ನ ಮಗಳೊಂದಿಗೆ ಸುಮಾರು 5 ರಿಂದ 6 ಗಂಟೆಗಳ ಕಾಲ ಕುಳಿತು ಚರ್ಚೆ ಮಾಡದ್ದೆ ಎಂದು ಹೇಳಿದರು.

ನನ್ನ ಹೆಂಡತಿ ಚನ್ನಾಗಿ ಆ್ಯಕ್ಟಿಂಗ್​​ ಮಡುತ್ತಾಳೆ !

ಪತ್ನಿಯಾ ಸಿನಿಮಾ ಜೀವನದ ಬಗ್ಗೆ ಮಾತನಾಡಿದ ಸಂಜಯ್​ ಸಿಂಗ್​ ‘ ನನ್ನ ಹೆಂಡತಿ ಚನ್ನಾಗಿ ಆ್ಯಕ್ಟಿಂಗ್​ ಮಾಡುತ್ತಾಳೆ. ಆಕೆ ಅಭಿನಯಿಸಿದ್ದ ಛತ್ರಿಗಳು ಸಾರ್ ಛತ್ರಿಗಳು ಸಿನಿಮಾ ನೋಡಿದ್ದೆ. ನನಗೆ ಆ್ಯಕ್ಟಿಂಗ್​ ಬಗ್ಗೆ  ಹೆಚ್ಚು ಗೊತ್ತಿಲ್ಲದಿದ್ದರು ಕೂಡ ನನ್ನ ಹೆಂಡತಿ ಚನ್ನಾಗಿ ನಟನೆ ಮಾಡುತ್ತಾಳೆ ಎಂದು ಅನ್ನುಸ್ತು. ನಾನೂ ಕೂಡ ಕೊರಿಯಗ್ರಫಿ ಮಾಡುತ್ತೇನೆ. 2006ರಲ್ಲಿ ರಾಜ್​ಕುಮಾರ್​ ಅವರ ಸಾಂಗ್​​ಗಳಿಗೆ ಡ್ಯಾನ್ಸ್​​ ಮಾಡಿದ್ದೆ ಎಂದು ಹೇಳಿದರು.

ಇದನ್ನೂ ಓದಿ :ಎರಡನೇ ಮದುವೆ ಮಾಡಿಕೋ ಎಂದು ಒತ್ತಾಯ ಮಾಡಿದರು, ನಾನೇ ಆಗಲಿಲ್ಲ ! ಭಾಗ-03

ಡಿವೋರ್ಸ್ ಬಳಿಕ ನನ್ನ ಮತ್ತು ಪವಿತ್ರ ನಡುವೆ ಕಾಂಟ್ಯಾಕ್ಟ್​​ ಇಲ್ಲ !

ಯಾವತ್ತೂ ನಾನು ಪವಿತ್ರಾಳಿಗೆ ಡಿವೋರ್ಸ್​ ನೀಡಿದೆನೋ ಅಂದಿನಿಂದ ಆಕೆಯ ಜೊತೆಗೆ ಕಾಂಟ್ಯಾಕ್ಟ್​ ಇಲ್ಲ. ಮಾತನಾಡಲು ಪ್ರಯತ್ನಿಸಿಲ್ಲ. 2014ರವರೆಗೆ ನಾನು ಬೆಂಗಳೂರಲ್ಲಿ ಇದ್ದೆ,  ಅದಾದ ನಂತರ ಯುಪಿ, ಮುಂಬೈಗೆ ಹೋದೆ. ಆದರೆ  ನನಗೆ ಬೆಂಗಳೂರು ತುಂಬಾ ಇಷ್ಟಾ. ಇಲ್ಲಿಯ ಊಟ ಅದರಲ್ಲೂ ರಾಗಿಮುದ್ದೆ ಅಂದ್ರೆ ತುಂಬಾ ಇಷ್ಟಾ.

ಆದರೆ ಒಂದಷ್ಟು ಕಾರಣಗಳಿಂದ ನಾನು ಮುಂಬೈ ಬಿಟ್ಟು ಮತ್ತೆ ಯುಪಿಗೆ ಹೋದೆ, ಉತ್ತರಪ್ರದೇಶದಲ್ಲಿ ನಮ್ಮದು ಸಾಕಷ್ಟು ಜಮೀನು ಇದೆ. ಅಲ್ಲಿಯ ಒಂದು ಸ್ಕೂಲಲ್ಲಿ ಕಂಪ್ಯೂಟರ್​ ಕ್ಲಾಸ್​​ ಮಾಡಲು ನನಗೆ ಅವಕಾಶ ದೊರೆಯಿತು. ನಮ್ಮಪ್ಪ ಕೂಡ ಹೋಗಿ ನಾಲೆಡ್ಜ್​ ಶೇರ್ ಮಾಡು ಎಂದು ಹೇಳಿದರು. ಅದಕ್ಕೆ ನಾನು ಕಂಪ್ಯೂಟರ್​ ಶಿಕ್ಷಕನಾಗಿ ಕೆಲಸಕ್ಕೆ ಸೇರಿಕೊಂಡೆ. ನನ್ನ ಬಳಿಯಿದ್ದ  ವಿಧ್ಯಾರ್ಥಿಗಳು ತುಂಬಾ ಖುಷಿಯಿಂದ ಪಾಠ ಕಲಿಯುತ್ತಿದ್ದರು.

ನನ್ನ ಮಗಳೆ ನನ್ನ ಸರ್ವಸ್ವ !

ನನ್ನ ಜೀವನದಲ್ಲಿ ಅತ್ಯಂತ ಅಮೂಲ್ಯವಾದದ್ದು ನನ್ನ ಮಗಳು ಎಂದು ಹೇಳಿದ ಸಂಜಯ್​ ಸಿಂಗ್​ ‘ ಇನ್ನು ಕೂಡ ನನ್ನ ಮೊಬೈಲ್​ ಸ್ಕ್ರೀನ್​​ನಲ್ಲಿ ನನ್ನ ಮಗಳ ಪೋಟೋ ಇದೆ. ಆಕೆಯೆ ನನ್ನ ಜೀವನದ ಸರ್ವಸ್ವ, ಆಕೆಯನ್ನು ಹೊರತು ಪಡಿಸಿದರೆ ನನಗೆ ಬೇರೆ ಏನು ಬೇಡ. ಆಕೆಗಾಗಿ ನಾನು ಕೇವಲ ಕೋರ್ಟ್​ನಲ್ಲಿ ಮಾತ್ರ ಅತ್ತಿಲ್ಲ. ಇಂದಿಗು ಅವಳ ಬಗ್ಗೆ ನನ್ನಲ್ಲಿ ಫೀಲಿಂಗ್ಸ್​ ಇದೆ. ಆಕೆಯನ್ನು ನೆನಪಿಸಿಕೊಂಡರೆ ಇಂದು ನನ್ನ ಕಣ್ಣಲ್ಲಿ ನೀರು ಬರುತ್ತದೆ ಎಂದು ಹೇಳುತ್ತಾ ಭಾವುಕರಾದರು.

RELATED ARTICLES

Related Articles

TRENDING ARTICLES