Monday, December 16, 2024

ಮಹಿಳಾ ಪೊಲೀಸ್​​ ಸಿಬ್ಬಂದಿಗಳಿಗೆ ಇನ್ಸ್​ಪೆಕ್ಟರ್​ನಿಂದ ಲೈಂಗಿಕ ಕಿರುಕುಳ !

ಹುಬ್ಬಳ್ಳಿ : ಕಾನೂನು ಕಾಪಾಡಬೇಕಾದ ಪೊಲೀಸ್​ನೊಬ್ಬ ತಮ್ಮ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದು. ಇನ್ಸ್​​ಪೆಕ್ಟರ್​ ವಿರುದ್ದ ಠಾಣೆಯ ಮಹಿಳಾ ಸಿಬ್ಬಂದಿಗಳು ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಹುಬ್ಬಳ್ಳಿಯ ಹಳೆಹುಬ್ಬಳ್ಳಿ ಪೊಲೀಸ್​ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಯಳ್ಳೂರ ಮೇಲೆ ಗಂಭೀರ ಆರೋಪ ಬಂದಿದ್ದು. ಸುರೇಶ್​ ರಾತ್ರಿಯಾದರೆ ಮಹಿಳಾ ಸಿಬ್ಬಂದಿಗಳಿಗೆ ವಿಡಿಯೋ ಕರೆ ಮಾಡಿ ಕಾಮ ಪ್ರಚೋದಕ ಮತುಗಳನ್ನು ಆಡುತ್ತಾರೆ. ಕೆಟ್ಟದಾಗಿ ಅಸಹ್ಯ ಪದಗಳನ್ನು ಬಳಸಿಕೊಂಡು ಮಾತನಾಡುತ್ತಾರೆ. ಠಾಣೆಯಲ್ಲಿ ರಜೆ ಕೇಲಲು ಹೋದಾಗ ನಮ್ಮ ಸೌಂದರ್ಯದ ಬಗ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿ ಸುಮಾರು 3 ಪುಟಗಳ ಪತ್ರವನ್ನು ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ಸ್​ಪೆಕ್ಟರ್​​ ಕಿರುಕುಳಕ್ಕೆ ಬೇಸತ್ತಿರುವ ಮಹಿಳಾ ಸಿಬ್ಬಂದಿಗಳು ಸುಮಾರು ಪುಟಗಳಷ್ಟು ಪತ್ರವನ್ನು ಬರೆದಿದ್ದು. ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ಮಹಿಳಾ ಆಯೋಗಕ್ಕೆ ಪತ್ರ ಬರೆದು ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.ಇನ್ಸ್​​ಪೆಕ್ಟರ್​ ಮಾತಿನಿಂದ ಕುಟುಂಬದಲ್ಲಿ ಬಿರುಕುಗಳು ಮೂಡಿದ್ದು. ಇನ್ಸ್​ಪೆಕ್ಟರ್​ ಕಾಟದಿಂದ ಮುಕ್ತಿಕೊಡಿ ಎಂದು ಅಂಗಲಾಚಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES