ರಾಯಚೂರು : ಸಮಾಜವೇ ತಲೆತಗ್ಗಿಸುವಂತ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಸ್ವಂತ ಮಾವನೇ ಮನೆಯ ಸೊಸೆಯನ್ನು ಮಂಚಕ್ಕೆ ಕರೆದಿದ್ದಾನೆ. ಕೊನೆಗೆ ಇದಕ್ಕೆ ಒಪ್ಪದ ಸೊಸೆಯನ್ನು ಸಲಿಕೆಯಿಂದ ಒಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ರಾಯಚೂರು ತಾಲೂಕಿನ ಜಲುಮಗೇರ ಗ್ರಾಮದಲ್ಲಿ ಘಟನೆ ನಡೆದಿದೆ. ಸ್ವಂತ ಮಾವನೆ ಮನೆಯ ಮಗಳ ಸ್ವರೂಪಿಣಿಯಾದ ಸೊಸೆಯ ಮೇಲೆ ಕಣ್ಣಾಕಿದ್ದಾನೆ. 50 ವರ್ಷದ ರಾಮಲಿಂಗಯ್ಯ ಎಂಬಾತ ಮನೆಯ ಸೊಸೆಯದ 27 ವರ್ಷದ ಧೂಳಮ್ಮನ ಈ ಹಿಂದೆಯೂ ಕೂಡ ಎರಡು ಮೂರು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದನು. ಆದರೆ ಗ್ರಾಮದ ಮುಖಂಡರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿ ಸರಿ ಮಾಡಲಾಗಿತ್ತು.
ಆದರೆ ನೆನ್ನೆ 4ನೇ ಬಾರಿ ಮನೆಯಲ್ಲಿ ಎಲ್ಲರೂ ಕೆಲಸಕ್ಕೆ ಹೋದ ವೇಳೆ ಧೂಳಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸೊಸೆ ಮಾವನಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದಾಗ ಹಿಂಬಾಲಿಸಿ ಬಂದ ಮಾವ ಸಲಿಕೆಯಿಂದ ಸೊಸೆಯ ತಲೆಗೆ ಒಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಯರಗೇರಾ ಪೊಲೀಸ್ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.