Monday, December 16, 2024

ಡಾಲಿ ಮದುವೆಯ ಲಗ್ನ ಪತ್ರಿಕೆ ವೈರಲ್​ : ಸಿದ್ದರಾಮಯ್ಯ,ಯಡಿಯೂರಪ್ಪರಿಗೆ ಆಹ್ವಾನ !

ಬೆಂಗಳೂರು: ನಟ ಧನಂಜಯ್ ಲಗ್ನ ಪತ್ರಿಕೆ ರೆಡಿಯಾಗಿರುವ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಸ್ಟಾರ್ ನಟರ ಮದುವೆ ಕಾರ್ಡ್ ಗಳು ತುಂಬಾ ಅದ್ಧೂರಿಯಾಗಿರುತ್ತವೆ. ಹಾಗೆ ಆಮಂತ್ರಣ ಪತ್ರಿಕೆ ಜೊತೆ ಕೆಲವು ಕೊಡುಗೆಗಗಳನ್ನು ಮುಂಗಡವಾಗಿ ನೀಡುತ್ತಾರೆ. ಅದರೆ ಧನಂಜಯ್ ಇದಕ್ಕೆ ತದ್ವಿರುದ್ದವಾಗಿದ್ದು, ತುಂಬಾನೇ  ಸರಳವಾಗಿ  ಆಮಂತ್ರಣ ಪತ್ರಿಕೆ ಮಾಡಿಸಿದ್ದಾರೆ. ಮದುವೆ ಕರೆಯೋಲೆ ನೀಡಿದ ಅಭಿಮಾನಿಗಳು, ಅರ್ಥ ಪೂರ್ಣವಾದ ಮದುವೆಯ ಕರೆಯೋಲೆ. ಬಹುಶಃ ಈ ಶುಭ ಸಂಭ್ರಮದ ಕರೆಯೋಲೆಯಲ್ಲಿ ಕೈಯಾರೆ ಬರೆದ ಪ್ರತಿ ಅಕ್ಷರವೂ ಬರೆದವನ ಮನಸ್ಸಿನಲ್ಲಿ ಮತ್ತು ಕರೆಯೋಲೆ ಓದುವವನ ಮನಸ್ಸಿನಲ್ಲಿ ಸಂತೃಪ್ತಿಯ ಭಾವ ಮೂಡಿಸಲಿದೆ  ಎಂದು  ಸೂರ್ಯ ಗೌಡ ಎಂಬವರು  ಕಮೆಂಟ್  ಮಾಡಿದ್ದಾರೆ.

ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರಿಗೆ ಪತ್ರಿಕೆ ವಿತರಣೆ !

ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪರಿಗೆ ಈಗಾಗಲೇ ಲಗ್ನ ಪತ್ರಿಕೆಯನ್ನು ಹಂಚಿಕೆ ಮಾಡಿರುವ ಪೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸರಳ ಲಗ್ನಪತ್ರಿಕೆಯಲ್ಲಿ ಏನಿದೆ !

ಪ್ರೀತಿಯ ಬಂಧು ಮಿತ್ರರೇ,
ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತ ಮಾಡುವ ನಮಸ್ಕಾರಗಳು. ನಾವು  ಖುಷಿಯಾಗಿದ್ದೇವೆ, ನಮ್ಮಿ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮಿ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಾಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇನೆ. ತಾವು ಎಲ್ಲಿದ್ದರೂ, ಜಗದ ಯಾವ ಮೂಲೆಯಲ್ಲಿದ್ದರೂ, ಕುಟುಂಬ ಸಮೇತರಾಗಿ ಬಂದು ನಮ್ಮಿ ಸಮಾಗಮಕ್ಕೆ ನೀವು  ಆಶೀರ್ವಾದ ಮಾಡಬೇಕು. ಪ್ರೇಮದ ಭರವಸೆಯಲ್ಲಿ ಬಾಳಿನ ಬೆಳಕು ನಮ್ಮ ಪ್ರೀತಿ ದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ.
ಮತ್ತೆಲ್ಲಾ ಕ್ಷೇಮವಷ್ಟೇ!
ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ
ಧನಂಜಯ-ಧನ್ಯತ

ಆರತಕ್ಷತೆ: 15-02-2025ನೇ ಶನಿವಾರ ಸಂಜೆ 6 ಗಂಟೆಗೆ
ಮುಹೂರ್ತ: 16-02-2025ನೇ ಭಾನುವಾರ ಬೆಳಗ್ಗೆ 8.20 ರಿಂದ 10.00 ಗಂಟೆ, ಲಗ್ನ: ಮೀನ
ಸ್ಥಳ: ವಸ್ತು ಪ್ರದರ್ಶನ ಮೈದಾನ, ಅಂಬಾವಿಲಾಸ ಅರಮನೆ ಮುಂಭಾಗ, ಮೈಸೂರು

RELATED ARTICLES

Related Articles

TRENDING ARTICLES