Wednesday, January 22, 2025

ಕೇಂದ್ರ ಸರ್ಕಾರದ ಮೇಲೆ ಮುಗಿಬಿದ್ದ ರಾಹುಲ್​ : ಇಂದು ಸಂಜೆ ಮೋದಿ ನೀಡುವ ಪ್ರತ್ಯುತ್ತರವೇನು !

ದೆಹಲಿ : ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲಿ ಸ್ಪೀಕರ್​ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಿದ್ದು. ಇದರ ಹಿನ್ನಲೆಯಲ್ಲಿ ಇಂದು ಮಾತನಾಡಿದ ವಿಪಕ್ಷ ನಾಯಕ ರಾಹುಲ್​ ಗಾಂಧಿ ಮೋದಿ ಸರ್ಕಾರದ ಮೇಲೆ ಮುಗಿಬಿದ್ದಿದ್ದಾರೆ. ಇದರ ನಡುವೆ ಇಂದು ಸಂಜೆ ಪ್ರಧಾನಿ ಮೋದಿ ಲೋಕಸಭೆಯಲ್ಲಿ ಮಾತನಾಡಲಿದ್ದು. ಮೋದಿ ನೀಡುವ ಉತ್ತರದ ಕುರಿತು ದೇಶವೆ ಕುತೂಹಲದಿಂದ ಕಾಯುತ್ತಿದೆ.

ಸಂವಿಧಾನದ 75 ವರ್ಷಾಚರಣೆಯ ಹಿನ್ನಲೆ ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಚರ್ಚೆ ನಡೆಯುತ್ತಿದ್ದು. ಏರ್ಪಪೋರ್ಟ್​, ಬಂಧರುಗಳು, ಧಾರವಿಯನ್ನು ಅಧಾನಿಗೆ ನೀಡಿದ್ದೀರಿ. ಆದರೆ ಯುವಕರ, ಬಡವರ, ಹಿಂದುಳಿದವರ ಬೆರಳುಗಳನ್ನು ಕಟ್​ ಮಾಡುವ ಕೆಲಸವನ್ನು ಮೋದಿ ಸರ್ಕಾರ ಮಾಡುತ್ತಿದೆ. ಬೆಳಿಗ್ಗೆಯೆ ಎದ್ದು ಯುವಕರು ಕಠಿಣ ಪರಿಶ್ರಮದಿಂದ ಪರೀಕ್ಷೆಗೆ ತಯಾರಿ ಮಾಡಿದರೆ ನೀವು ಪ್ರಶ್ನೆ ಪತ್ರಿಕೆ ಲೀಕ್​ ಮಾಡುವ ಮೂಲಕ ಅವರ ಬೆರಳನ್ನು ಕಟ್​ ಮಾಡೀದ್ದೀರ.

ಇಂದು ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಟಿಯರ್​ ಗ್ಯಾಸ್​ ಸಿಡಿಸಿದ್ದೀರಿ.  ರೈತರು ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ  ಕೇಳ್ತೀದ್ದೀರೆ ಅವರ ಮೇಲೆ ಏಕೆ ದೌರ್ಜನ್ಯ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು. ಮುಂದುವರಿದು ಮಾತನಾಡಿದ ರಾಹುಲ್​ ಸಂವಿಧಾನದಲ್ಲಿ ಎಲ್ಲಿಯೂ ಪೇಪರ್​ ಲೀಕ್​ ಆಗಬೇಕು, ಅಗ್ನಿವೀರ್​ ನೇಮಿಸಿಕೊಳ್ಳಬೇಕು, ಯುವಕರ ಹಕ್ಕನ್ನು ಕಿತ್ಕೋಬೇಕು ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಕೇಂದ್ರ ಸರ್ಕಾರ ಇಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಹತ್ರಾಸ್​ ಅತ್ಯಾಚಾರದ ಕುರಿತು ಮಾತನಾಡಿದ ರಾಹುಲ್​ ‘ ಕೆಲ ದಿನಗಳ ಹಿಂದೆ ಹತ್ರಾಸ್ ಹೋಗಿದ್ದೆ,
ನಾಲ್ಕು ವರ್ಷಗಳ ಹಿಂದೆ ಹುಡುಗಿಯ ಗ್ಯಾಂಗ್ ರೇಪ್ ಆಗುತ್ತೆ, ನಾಲ್ಕು ಜನ ಸೇರಿ ಅತ್ಯಾಚಾರ ಮಾಡ್ತಾರೆ
ಯಾರು ಅತ್ಯಾಚಾರ ಮಾಡಿದ್ದಾರೆ ಅವರು ಇಂದು ಹೊರಗಡೆ ತಿರುಗುತ್ತಿದ್ದಾರೆ. ಆದರೆ ಹುಡುಗಿಯ ತಂದೆ ತಾಯಿ ಮಾತ್ರ ಮನೆಯ ಒಳಗಡೆ ಇದ್ದಾರೆ. ಸಂವಿಧಾನದಲ್ಲಿ ಯಾರಿಗೆ ಅನ್ಯಾಯವಾಗಿದೆಯೋ ಅವರು ಮನೆಯ ಒಳಗಡೆ ಇರಬೇಕು ಎಂದು ಬರೆದಿದೆಯಾ ಎಂದು ಸ್ಪೀಕರ್​ಗೆ ಪ್ರಶ್ನಿಸಿದರು.

ಮುಂದುವರಿದು ಮಾತನಾಡಿದ ರಾಹುಲ್​ ‘ ಆ ಅತ್ಯಾಚಾರ ಪ್ರಕರಣ ನಡೆದು 4 ವರ್ಷಗಳು ಕಳೆದಿದೆ. ಆದರೆ ಆರೋಪಿಗಳು ಇನ್ನು ಪತ್ತೆಯಾಗಿಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಕೂಡ ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. ಅತ್ಯಾಚಾರ ಮಾಡಿದವರು ಈ ದೇಶದಲ್ಲಿ ಬಹಿರಂಗವಾಗಿ ತಿರುಗಾಡಬಹುದು ಎಂದು ಯಾವ ಸಂವಿಧಾನದಲ್ಲಿ ಹೇಳಿದೆ ಎಂದರು.

ದೇಶದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಬಗ್ಗೆ ಮಾತನಾಡಿದ ರಾಹುಲ್​ ‘ ಈ ದೇಶದಲ್ಲಿ ಸಮಾನತೆ ಇಲ್ಲ, ಹಾಗಾಗಿ ಇಂಡಿಯಾ ಬ್ಲಾಕ್​ ಮಾಡಿ ಜಾತಿ ಗಣತಿ ಮಾಡಬೇಕು ಎಂದು ಒತ್ತಾಯಾ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಬಂದ ಮೇಲೆ ನಾವು 50% ಮೀಸಲಾತಿ ತರುತ್ತೇವೆ. ಮೀಸಲಾತಿಗೆ ಸರ್ಕಾರ ಮಾಡಿರುವ ಬಂಧನವನ್ನು ಒಡೆತಯುತ್ತೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES