ದೆಹಲಿ : ದೇಶ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷವಾದ ಹಿನ್ನಲೆಯಲ್ಲಿ ಸಂಸತ್ನಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿದ್ದು. ಪ್ರಧಾನಿ ನರೇಂದ್ರ ಮೋದಿಯವರು ಇದರ ಕುರಿತು ಮಾತನಾಡಿ ದೇಶದ ಇತಿಹಾಸದಲ್ಲಿ ಎಮರ್ಜೆನ್ಸಿ ಎಂಬುದು ಕರಾಳ ಇತಿಹಾಸ ಎಂದು ಬಣ್ಣಿಸಿದರು.
ಸಂವಿಧಾನ ಅಳವಡಿಸಿಕೊಂಡು 75 ವರ್ಷವಾದ ಹಿನ್ನಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆ ಮಾಡಲು ಅವಕಾಶ ಮಾಡಿಕೊಟ್ಟಿದ್ದು. ಇಂದು ಮಧ್ಯಹ್ನ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅಧಾನಿ, ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಬಿಜೆಪಿ ದೇಶದಲ್ಲಿ ಸಂವಿಧಾನವನ್ನು ಕೊಲ್ಲುತಿದೆ ಎಂದು ಮಾತನಾಡಿದರು.
ಇದಕ್ಕೆ ಪ್ರತಿಯಾಗಿ ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಸಂಸತ್ನಲ್ಲಿ ಮಾತನಾಡಿದ್ದು. ಭಾರತದ ಪ್ರಜಾಸತ್ತಾತ್ಮಕ ಇತಿಹಾಸವು ಜಗತ್ತಿಗೆ ಸ್ಫೂರ್ತಿಯಾಗಿದ್ದು, ವಿಶ್ವ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಸಂವಿಧಾನದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರು ವಿಶೇಷ ಚರ್ಚೆಯಲ್ಲಿ ತಿಳಿಸಿದರು. “ಸಂವಿಧಾನ ಎಂದರೆ ಕೋಟ್ಯಂತರ ಜನರ ಭಾವನೆಗೆ ಸಂಬಂಧಿಸಿದ್ದು, ಇದು ಭಾರತದ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಸಂವಿಧಾನ ನಿರ್ಮಾತೃರಿಗೆ ಭಾರತದ ಚರಿತ್ರೆಯ ಬಗ್ಗೆ ತಿಳಿದಿತ್ತು.” ಎಂದು ಹೇಳಿದರು.
ತುರ್ತು ಪರಿಸ್ಥಿತಿ ವೇಳೆ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು !
ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ‘ ಕಾಂಗ್ರೆಸ್ ಸರ್ಕಾರ ಎಮರ್ಜೆನ್ಸಿ ಘೋಷಿಸಿ ಸಂವಿಧಾನ ನಿರ್ಮಾತೃಗಳ ಕನಸನ್ನು ಮಣ್ಣುಪಾಲು ಮಾಡಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಾಂಗ್ರೆಸ್ ಹಾಳು ಮಾಡಿದೆ. ಇದರೊಂದಿಗೆ ಎಮರ್ಜೆನ್ಸಿ ವೇಳೆ ಜನರ ಹಕ್ಕನ್ನು ಕಸಿದುಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಅಧಿಕಾರ ನೀಡುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು!
ಭಾರತ ಪ್ರತಿ ಪ್ರಮುಖ ನೀತಿ ನಿರ್ಧಾರದ ಕೇಂದ್ರಬಿಂದು ಮಹಿಳೆಯರೇ ಆಗಿದ್ದು, ಭಾರತ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸಂದರ್ಭ ವಿಶ್ವದ ಎದುರು ಮಹಿಳಾ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ಅವರು ಪ್ರತಿನಿಧಿತ್ವ ದೇಶಕ್ಕೆ ಗೌರವ ತರುವಂತದ್ದು. ವಿಜ್ಞಾನ ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಭಾರತೀಯರು ಹೆಮ್ಮೆ ಪಡುವಂತದ್ದು. ಇನ್ನು ಮಹಿಳೆಯರಿಗೆ ಅಧಿಕಾರ ನೀಡುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು. ನಮ್ಮ ಸರ್ಕಾರದಲ್ಲಿ ನಾರಿ ಶಕ್ತಿ ಬಂಧನ್ ಅಧಿನಿಯಮ್ ಜಾರಿ ಮಾಡಲಾಗಿದ್ದು, ನಮ್ಮ ಮಹಿಳೆಯರ ಶಕ್ತಿಯನ್ನು ಭಾರತದ ರಾಜಕೀಯದಲ್ಲಿ ಬಳಸಿಕೊಳ್ಳಲು ಜಾರಿ ಮಾಡಲಾಯ್ತು. ಇದರಿಂದ ನಮ್ಮ ಮಹಿಳಾ ಸಂಸದೆಯರ ಸಂಖ್ಯೆ, ಅವರ ಕೊಡುಗೆ ಜಾಸ್ತಿಯಾಗಿದ್ದು, ಇವರೆಲ್ಲರ ಕೊಡುಗೆಯಿಂದ 2047ರಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.