Saturday, January 18, 2025

ಕಬ್ಬಡಿ ಆಟಗಾರ ಪ್ರೀತಮ್​ ಶೆಟ್ಟಿ ಎದೆ ನೋವಿನಿಂದ ಸಾ*ವು !

ಮಂಡ್ಯ : ಕಬ್ಬಡಿ ಆಟವಾಡುವ ವೇಳೆ ಎದೆ ನೋವಿನಿಂದ  ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಉಡುಪಿ ಮೂಲದ ಪ್ರೀತಮ್​ ಶೆಟ್ಟಿ ಮೃತ ಯುವಕನೆಂದು ಗುರುತಿಸಲಾಗಿದೆ ಎಂದು ತಿಳಿದು ಬಂದಿದೆ.

ಮಂಡ್ಯದ ನಾಗಮಂಗಲದ ಸುಖಧರೆ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದಲ್ಲಿ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿತ್ತು. ಉಡುಪಿಯಿಂದ ಪ್ರೀತಮ್​ ಮತ್ತು ಆತನ ತಂಡ ಕಬ್ಬಡಿ ಆಡಲು ಸುಖಧರೆ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಪ್ರೀತಮ್​ ಎದೆ ನೋವಿನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಿದ್ದು. ನಾಗಮಂಗಲ ಗ್ರಾಮಾಂತರ ಪೋಲಿಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

ವಿದೇಶಕ್ಕೆ ತೆರಳಬೇಕಿದ್ದ ಯುವಕ, ಸೇರಿದ್ದು ಸಾವಿನ ಮನೆಗೆ !

ಶುಕ್ರವಾರ ನಾಗಮಂಗಲದಲ್ಲಿ ತನ್ನ ಕಬ್ಬಡಿ ಆಟದ ತಂಡದೊಂದಿಗೆ ಆಡಿದ ಕೆಲವೇ ಕ್ಷಣಗಳ ನಂತರ ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ತಂಡದ ಸಹ ಆಟಗಾರರು ಆಸ್ಪತ್ರೆಗೆ ದಾಖಲಿಸಿದರೂ, ಅಷ್ಟೊತ್ತಿಗೆ ಆಗಲೇ ಪ್ರೀತಮ್ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಪ್ರೀತಮ್ ಅವರು ಇನ್ನು ಕೆಲವೇ ದಿನಗಳಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ ವಿಧಿಯ ಕ್ರೂರ ಲೀಲೆಗೆ ಅವರು ಇಹಲೋಕ ತ್ಯಜಿಸಬೇಕಾಯಿತು. ಮೃತರು ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES