ಮಂಡ್ಯ : ವಿಧ್ಯಾರ್ಥಿಗಳು ಹನುಮ ಮಾಲೆ ಧರಿಸಿ ಶಾಲೆಗೆ ಬಂದ ಹಿನ್ನಲೆಯಲ್ಲಿ ಶಿಕ್ಷಕಿಯೊಬ್ಬರು ಅವಹೇಳನ ಮಾಡಿದ್ದು. ಇದಕ್ಕೆ ಪ್ರತಿಯಾಗಿ ಹನುಮಾ ಮಾಲಾಧಾರಿಗಳು ಶಾಲೆಗೆ ಮುತ್ತಿಗೆ ಹಾಕಿದ್ದಾರೆ ಎಂದು ಮಾಹಿತಿ ದೊರೆತಿದೆ.
ಶ್ರೀರಂಗಪಟ್ಟಣ ಟೌನ್ನ ಗಂಜಾಮ್ನ, ಆರ್.ಸಿ. ಏಡೆಡ್ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಘಟನೆ ನಡೆದಿದ್ದು. ಶಾಲೆಯ ಕೆಲವು ವಿಧ್ಯಾರ್ಥಿಗಳು ಹನುಮ ಮಾಲೆ ಧರಿಸಿ ಶಾಲೆಗೆ ಆಗಮಿಸಿದ ಹಿನ್ನಲೆ ಶಾಲೆಯ ಶಿಕ್ಷಕಿ ವಿಧ್ಯಾರ್ಥಿಗಳಿಗೆ ಕಿರುಕುಳ ನೀಡಿ, ಅವಹೇಳನ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಇಂದು ನೂರಾರು ಹನುಮ ಮಾಲಾಧಾರಿಗಳು ಕ್ರಿಶ್ಚಿಯನ್ ಶಾಲೆಗೆ ಮುತ್ತಿಗೆ ಹಾಕಿದ್ದು. ಶಾಲಾ ಮುಖ್ಯೋಪಧ್ಯಾಯಿನಿ ಸೇರಿದಂತೆ ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ಹಿಂದೂ ಧರ್ಮದ ದೇವರ ಪೋಟೋ ಹಾಕದೆ ಏಸು ಫೋಟೋ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಶಾಲೆಯ ದ್ವಾರದಲ್ಲಿ ಸರಸ್ವತಿ ಮಾತೆಯ ಪೋಟೋ ಹಾಕುನ ಪೂಜೆ ಸಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ. ಶಿಕ್ಷಕಿ ತಮ್ಮ ಅನುಚಿತ ವರ್ತನೆಗೆ ಕ್ಷಮೆ ಕೇಳಿದ ಬಳಿಕ ಪ್ರತಿಭಟನೆ ವಾಪಾಸು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.