ಹಾವೇರಿ: ದೇವರು ವರ ಕೊಟ್ಟರು ಪೂಜಾರಿ ವರ ಕೊಡಲ್ಲ ಅನ್ನೋ ಹಾಗೆ ಆಗಿದೆ ಈ ವಿದ್ಯಾರ್ಥಿನಿಯರ ಪರಿಸ್ಥಿತಿ. ರಾಜ್ಯ ಸರ್ಕಾರ ಹೆಣ್ಣು ಮಕ್ಕಳು ನಾಲ್ಕು ಗೋಡೆ ಮಧ್ಯೆ ಇರುವುದನ್ನು ಬಿಟ್ಟು ಎಲ್ಲಾ ಕಡೆ ಓಡಾಡಲಿ ಅಂತ ಗ್ಯಾರೆಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆ ಮೂಲಕ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿದೆ. ಆದರೆ ಇಲ್ಲೊಬ್ಬ ಲೇಡಿ ಕಂಡಕ್ಟರ್ ಶಾಲೆಗೆ ಹೋಗೊ ವಿದ್ಯಾರ್ಥಿನಿಯರಿಗೆ ತನ್ನದೇ ಆದ ರೂಲ್ಸ್ ಮಾಡಿದ್ದಾರೆ, ಏನಿದು ಈ ಕಂಡಕ್ಟರ್ ಹೊಸ ರೂಲ್ಸ್ ಅಂತೀರಾ ಹಾಗಿದ್ದರೆ ಈ ಸ್ಟೋರಿ ನೋಡಿ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ರಸ್ತೆಯಲ್ಲಿರುವ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಸತಿ ಶಾಲೆಯ ವಿದ್ಯಾರ್ಥಿನಿಯರು ರಾಣೆಬೆನ್ನೂರು ಕಾಲೇಜಿಗೆ ಹೋಗುತ್ತಾರೆ, ಇದೇ ವಸತಿ ನಿಲಯದ ಸುಮಾರು 150 ವಿದ್ಯಾರ್ಥಿಗಳು ರಾಣೆಬೆನ್ನೂರ ಕಾಲೇಜಿಗೆ ಹೋಗುತ್ತಾರೆ ಈ ವಿದ್ಯಾರ್ಥಿಗಳಿಗೆ ಹಲಗೇರಿ ಮಾರ್ಗವಾಗಿ ರಾಣೆಬೆನ್ನೂರಿಗೆ ಹೋಗುವ ಲೇಡಿ ಬಸ್ ಕಂಡಕ್ಟರ್ ನಮ್ಮ ಬಸ್ ನಲ್ಲಿ ಕೇವಲ ಐದು ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ಎಂಬ ಹೊಸ ರೂಲ್ಸ್ ಮಾಡಿದ್ದಾರೆ, ಲೇಡಿ ಕಂಡಕ್ಟರ್ ಹೊಸ ರೂಲ್ಸ್ ಗೆ ವಿದ್ಯಾರ್ಥಿಗಳು ಮುಂದೆ ಹೇಗಪ್ಪ ನಾವು ಕಾಲೇಜಿಗೆ ಹೋಗೋದು ಎಂದು ಚಿಂತೆಗೀಡಾಗಿದ್ದಾರೆ.
ನಮ್ಮ ಬಸ್ಸಿನಲ್ಲಿ ಕೇವಲ ಐದು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಉಳಿದವರು ಏನು ಬೇಕಾದರೂ ಮಾಡಿಕೊಳ್ಳಿ, ನಮ್ಮ ಬಸ್ ನಲ್ಲಿ ಐವರು ವಿದ್ಯಾರ್ಥಿನಿಯರು ಮಾತ್ರ ಹತ್ತೊಕೆ ಅವಕಾಶ ಒಂದು ವೇಳೆ ಐದಕ್ಕಿಂತ ಹೆಚ್ಚಿನ ವಿದ್ಯಾರ್ಥಿನಿಯರು ಹತ್ತಿದರೆ ಮುಲಾಜಿಲ್ಲದೆ ಬಸ್ಸಿನಿಂದ ಕೆಳಗಡೆ ಇಳಿಸುತ್ತೇನೆ ಎಂದು ವಿದ್ಯಾರ್ಥಿಗಳ ಮೇಲೆ ದರ್ಪ ತೋರಿಸುತ್ತಿದ್ದಾರೆ, ದರ್ಪ ತೋರಿಸುವುದಲ್ಲದೆ ವಿದ್ಯಾರ್ಥಿನಿಯರ ಮೇಲೆ ಅನುಚಿತ ವರ್ತನೆ ತೋರಿದ್ದಾರೆ, ಇನ್ನೊಮ್ಮೆ ನಮ್ಮ ಬಸ್ ಹತ್ತಿದರೆ ಸರಿ ಇರಲ್ಲ ಎಂದು ಮಹಿಳಾ ಕಂಡಕ್ಟರ್ ವಿದ್ಯಾರ್ಥಿಯರಿಗೆ ಅವಾಜ್ ಹಾಕಿದ್ದಾರೆ, ಲೇಡಿ ಕಂಡಕ್ಟರ್ ಅವಾಜ್ ಹಾಕಿದ ವಿಡಿಯೋ ಇದೀಗ ವೈರಲ್ ಆಗಿದೆ,
ಈ ಲೇಡಿ ಕಂಡಕ್ಟರ್ಗೆ ಬುದ್ಧಿ ಕಲಿಸಲೇಬೇಕು ಎಂದು ತೀರ್ಮಾನ ಮಾಡಿದ ವಿದ್ಯಾರ್ಥಿನಿಯರು, ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಬಳಿ ಈ ಲೇಡಿ ಕಂಡಕ್ಟರ್ ಒಬ್ಬರು ದಿನನಿತ್ಯ ನಮ್ಮ ಜೊತೆ ಅಮಾನವೀಯ ವಾಗಿ ನಡೆದುಕೊಳ್ಳುತ್ತಾರೆ, ಬಾಯಿಗೆ ಬಂದ ಹಾಗೆ ಬೈಯುತ್ತಾರೆ ಬಸ್ಸಿನಲ್ಲಿ ಹತ್ತುವುದಕ್ಕೂ ಸಹ ಬಿಡುವುದಿಲ್ಲ ಇವರಿಗೆ ಹೇಗಾದರೂ ಮಾಡಿ ಬುದ್ಧಿ ಕಲಿಸಿ ಎಂದು ಮನವಿ ಸಲ್ಲಿಸಿದ್ದಾರೆ, ಒಟ್ಟಾರೆಯಾಗಿ ಈ ವಿದ್ಯಾರ್ಥಿನಿಯರ ಮನವಿಯನ್ನ ಸ್ವೀಕರಿಸಿದ ಅಧಿಕಾರಿಗಳು ಲೇಡಿ ಕಂಡಕ್ಟರ್ ಗೆ ಬುದ್ಧಿ ಕಲಿಸಿ ಬಸ್ ಹತ್ತುವುದಕ್ಕೆ ಅವಕಾಶ ಮಾಡಿ ಕೊಡ್ತಾರಾ ಅನ್ನೋದನ್ನ ಕಾದು ನೋಡಬೇಕು