Wednesday, January 22, 2025

ನಮ್ಮ ಮೆಟ್ರೋದಲ್ಲಿ ಭಿಕ್ಷಾಟನೆ ನಡೆಸಿದ ಹೈಟೆಕ್​ ಭಿಕ್ಷುಕ !

ಬೆಂಗಳೂರು : ನಾವು ಸಾಮಾನ್ಯವಾಗಿ ದೇವಾಸ್ಥಾನದ ಮುಂಬಾಗದಲ್ಲಿ, ರಸ್ತೆಗಳಲ್ಲಿ, ಸಿಗ್ನಲ್​ಗಳಲ್ಲಿ ಬಿಕ್ಷುಕರನ್ನು ಕಂಡಿರುತ್ತೇವೆ. ಆದರೆ ಇಲ್ಲೊಬ್ಬ ಹೈಟೆಕ್​​ ಭಿಕ್ಷುಕನೊಬ್ಬ ಕ್ಯೂಆರ್​ ಕೋಡ್​ ಮೂಲಕ ಮೆಟ್ರೋ ಟಿಕೆಟ್​ ಖರೀದಿಸಿ, ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ನಡೆಸಿದ್ದಾನೆ. ಈಗ ಇದರ ವಿಡಿಯೋ ಸೋಷಿಯಲ್​ ಮಿಡಿಯಾದಲ್ಲಿ ವೈರಲ್​ ಆಗಿವೆ.

ಸಿಲಿಕಾನ್ ಸಿಟಿಯ ಸಿಗ್ನಲ್​ಗಳಲ್ಲಿ, ದೇವಾಲಯಗಳ ಮುಂದೆ, ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಭಿಕ್ಷುಕರನ್ನ ನೋಡಿದ್ವಿ.ಇನ್ನೂ ಕೆಲವು ಕಡೆ KSRTC ಬಸ್​ಗೆ ಹತ್ತಿ, ರೈಲಿಗಳಿಗೂ ಹತ್ತಿ ಭಿಕ್ಷೆ ಬೆಡೋದನ್ನ ನೋಡಿದ್ದೇವೆ. ಆದರೆ ಇಲ್ಲೊರ್ವ ಹೈಟೆಕ್​ ಭಿಕ್ಷುಕನೋರ್ವ ಮೆಟ್ರೋ ರೈಲಿನೊಳಗೆ ಭಿಕ್ಷಾಟನೆ ನಡೆಸಿದ್ದಾನೆ.

ಚಲಘಟ್ಟ ದಿಂದ ವೈಟ್​ಫಿಲ್ಡ್​​ ಮಾರ್ಗದ ಮೆಟ್ರೋದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬ ಭಿಕ್ಷಾಟನೆ ನಡೆಸಿದ್ದು. ಕ್ಯೂಆರ್​ ಕೋಡ್​ ಮೂಲಕ ಟೆಕೆಟ್​ ಖರೀದಿಸಿ ಮೆಟ್ರೋ ಹತ್ತಿದ್ದಾನೆ ಎಂದು ತಿಳಿದು ಬಂದಿದೆ. ತನ್ನ ದೈಹಿಕ ಹೂನವನ್ನು ತೋರಿಸಿಕೊಂಡು ಮೆಟ್ರೋದಲ್ಲಿ ಭಿಕ್ಷಾಟನೆ ನಡೆಸಿದ್ದು. ಭಿಕ್ಷುಕನನ್ನು ಕಂಡ ಪ್ರಯಾಣಿಕರು ದಂಗಾಗಿದ್ದು. ಇಲ್ಲಿಯೂ ಶುರು ಮಾಡಿಕೊಂಡು ಬಿಟ್ರಾ ಎಂಬ ಮಾತುಗಳು ಕೇಳಿಬಂದಿವೆ.

RELATED ARTICLES

Related Articles

TRENDING ARTICLES