Thursday, January 16, 2025

ಟೀ ಕುಡಿದು , ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿದ ಕಿರಾತಕರು !

ಮೈಸೂರು:  ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಟೀ ಅಂಗಡಿ ಮುಂದೆ ಗಲಾಟೆಯಾಗಿದ್ದು. ಅಂಗಡಿ ಮುಂದೆ ಗಲಾಟೆ ಮಾಡಬೇಡಿ ಎಂದ ಅಂಗಡಿ ಮಾಲೀಕನಿಗೆ ಚಾಕುವಿನಿಂದ ಇರಿಸಿರುವ ಘಟನೆ  ಮೈಸೂರಿನಲ್ಲಿ ನಡೆದಿದ್ದು. ನಂಜನಗೂಡು ಪೋಲಿಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂಜನಗೂಡಿನ ವಾಸುಕಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದ್ದು. ಶಂಕರಪುರ ಗ್ರಾಮದ ಯೋಗಿ, ಹರ್ಷಿತ್ ಕಿರಣ್ ಮತ್ತು ಇತರರು ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿದ್ದರು. ಈ ವೇಳೆ ಅವರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯ ಜಗಳವಾಗಿದ್ದು. ಈ ವೇಳೆ ಮಧ್ಯೆ ಪ್ರವೇಶಿಸಿದ ಅಂಗಡಿ ಮಾಲೀಕ ಗಿರೀಶ್​ ಜಗಳ ಮಾಡಿ ವ್ಯಾಪರಕ್ಕೆ ತೊಂದರೆ ಮಾಡಬೇಡಿ. ಇಲ್ಲಿಂದ ಹೋಗಿ ಎಂದು ಹೇಳಿದ್ದಾನೆ.

ಇದರಿಂದ ಕೆರಳಿದ ಕಿರಾತಕರಾದ ಹರ್ಷಿತ್​, ಕಿರಣ ಮತ್ತು ಸಂಗಡಿಗರು ಗಿರೀಶ್​ ಜೊತೆ ಗಲಾಟೆ ತೆಗೆದು ಕಿರಿಕ್​ ಮಾಡಿದ್ದಾರೆ. ಈ ವೇಳೆ ತನ್ನ ಬಳಿಯಿದ್ದ ಚಾಕುವಿನಿಂದ ಗಿರೀಶ್​ಜ ತಲೆಗೆ ಇರಿದಿದ್ದು. ಗಿರೀಶ್​ ತೀವ್ರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ. ಗಾಯಗೊಂಡ ಅಂಗಿಡಿ ಮಾಲೀಕನನ್ನು ಕೆ.ಆರ್​ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ‘

ಘಟನೆ ಸಂಬಂಧ ಯೋಗಿ, ಹರ್ಷಿತ್ ಕಿರಣ್ ಹಾಗೂ ಇತರರ ಮೇಲೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES