ಆಸ್ಟ್ರೇಲಿಯಾ : ಭಾರತದ ಪಾಳಯಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ಗೆ ಮೊದಲು ನಾಯಕ ರೋಹಿತ್ ಶರ್ಮಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಅಶಿಸ್ತಿನ ಬಗ್ಗೆ ಕೋಪಗೊಂಡು ಅವರನ್ನು ಹೋಟೆಲ್ನಲ್ಲೆ ಬಿಟ್ಟು ಹೋಗಿದ್ದಾರೆ ಎಂದು ಮಾಹಿತಿ ದೊರೆತಿದೆ
ಬ್ರಿಸ್ಬೇನ್‌ಗೆ ವಿಮಾನ ಹಿಡಿಯಲು ಭಾರತ ತಂಡವು ಬುಧವಾರ ಬೆಳಗ್ಗೆ ಅಡಿಲೇಡ್‌ನಿಂದ ಹೊರಡಬೇಕಿತ್ತು. ಆದರೆ ಸಹಾಯಕ ಸಿಬ್ಬಂದಿ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಸ್ಥಳೀಯ ಸಮಯ 8:30ಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಂಡದ ಹೋಟೆಲ್ ಲಾಬಿಯನ್ನು ತಲುಪಿದ್ದು ಆದರೆ ಜೈಸ್ವಾಲ್ ಇರಲಿಲ್ಲ.ಯಶಸ್ವಿ ಜೈಸ್ವಾಲ್ ಸಮಯಪಾಲನೆ ಮಾಡಿದ್ದರೂ, ಅವರು ಸಮಯಕ್ಕೆ ಲಾಬಿಗೆ ತಲುಪಲಿಲ್ಲ. ಜೈಸ್ವಾಲ್ ವಿಳಂಬಕ್ಕೆ ಕಾರಣ ತಿಳಿದಿಲ್ಲ.
ಆದರೆ ಅವರ ಅಶಿಸ್ತು ನಾಯಕ ರೋಹಿತ್‌ಗೆ ಇಷ್ಟವಾಗಲಿಲ್ಲ. ರೋಹಿತ್ ತಾಳ್ಮೆ ಕಳೆದುಕೊಂಡು ತಂಡದ ಬಸ್‌ನಿಂದ ಇಳಿದಿದ್ದರು ಎಂದು ವರದಿಯಾಗಿದೆ. ವರದಿಯ ಪ್ರಕಾರ, ಮ್ಯಾನೇಜರ್ ಮತ್ತು ತಂಡದ ಭದ್ರತಾ ಅಧಿಕಾರಿಗಳು ಸಹ ಬಸ್‌ನಿಂದ ಇಳಿದರು. ಸ್ವಲ್ಪ ಸಮಯದ ಚರ್ಚೆಯ ನಂತರ, ಎಲ್ಲರೂ ಮತ್ತೆ ಬಸ್ಸಿನಲ್ಲಿ ಕುಳಿತಿದ್ದು, ಯಶಸ್ವಿ ಜೈಸ್ವಾಲ್ ಇಲ್ಲದೆ ಬಸ್ ಹೊರಟಿತು.
ಬಸ್ ಹೊರಟು 20 ನಿಮಿಷಗಳ ನಂತರ ಜೈಸ್ವಾಲ್ ಲಾಬಿ ಪ್ರದೇಶವನ್ನು ತಲುಪಿದರು ಎಂದು ವರದಿ ತಿಳಿಸಿದೆ. ತಂಡದ ಮ್ಯಾನೇಜ್‌ಮೆಂಟ್ ಅವರಿಗೆ ಕಾರಿನ ವ್ಯವಸ್ಥೆ ಮಾಡಿದ್ದು, ತಂಡದ ಹಿರಿಯ ಭದ್ರತಾ ಅಧಿಕಾರಿ ಯಶಸ್ವಿಯನ್ನು ಕಾರಿನಲ್ಲಿ ಕರೆದುಕೊಂಡು ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ. ಕೊಹ್ಲಿ ಮತ್ತು ರೋಹಿತ್ ಅವರ ಫಾರ್ಮ್ ಮೇಲೆ ಕೇಂದ್ರೀಕರಿಸಿದ ಭಾರತೀಯ ಆಟಗಾರರು ಬುಧವಾರ ಬ್ರಿಸ್ಬೇನ್ ತಲುಪಿದ್ದು ಒಂದು ದಿನ ವಿಶ್ರಾಂತಿ ಪಡೆದು ಇಂದು ಅಭ್ಯಾಸ ನಡೆಸಿದರು.
ಹಗಲು-ರಾತ್ರಿ ಟೆಸ್ಟ್‌ನಲ್ಲಿ ಸೋಲಿನ ನಂತರ ಭಾರತ ಮತ್ತೆ ಫಾರ್ಮ್ ಗೆ ಮರುಳುತ್ತಾ ಇಲ್ಲವಾ? ಪ್ರಶ್ನೆಗಳು ಎದ್ದಿದ್ದು ಹಿರಿಯ ಆಟಗಾರರಾದ ರೋಹಿತ್ ಮತ್ತು ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಸ್ಥಾನ ಪಡೆಯಬೇಕಾದರೆ ಮುಂದಿನ ಎಲ್ಲಾ ಟೆಸ್ಟ್ ಪಂದ್ಯಗಳನ್ನು ಭಾರತ ಗೆಲ್ಲಲೇಬೇಕಿದೆ. ಇನ್ನು ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ತಮ್ಮ ಕುಟುಂಬಗಳೊಂದಿಗೆ ಚಾರ್ಟರ್ಡ್ ಫ್ಲೈಟ್‌ನಲ್ಲಿ ಬ್ರಿಸ್ಬೇನ್‌ಗೆ ಪ್ರಯಾಣಿಸಿದರು.