Thursday, January 16, 2025

ಮುರುಡೇಶ್ವರ ದುರ್ಘಟನೆ : ನೀರಿನ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ವಿಧಿಸಿದ ಬಿಬಿಎಂಪಿ !

ಬೆಂಗಳೂರು : ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ 4 ಜನ ವಿಧ್ಯಾರ್ಥಿಗಳು ನೀರುಪಾಲದ ಘಟನೆಯಿಂದ ಎಚ್ಚೆತಿರುವ ಬಿಬಿಎಂಪಿ. ಸಮುದ್ರ ಅಥವಾ ನೀರು ಇರುವ ಸ್ಥಳಕ್ಕೆ ಶೈಕ್ಷಣಿಕ ಪ್ರವಾಸ ಕೈಗೊಳ್ಳದಂತೆ ನಿರ್ಬಂದ ವಿಧಿಸಿದೆ ಎಂದು ಮಾಹಿತಿ ದೊರೆತಿದೆ.

ಕೋಲಾರದ ಮೋರಾರ್ಜಿ ದೇಸಾಯಿ ಶಾಲೆಯ ಮಕ್ಕಳು ಮುರುಡೇಶ್ವರಕ್ಕೆ ಪ್ರವಾಸಕ್ಕೆ ಹೋಗಿದ್ದರು. ಈ ವೇಳೆ ಸಮುದ್ರದಲ್ಲಿ ಆಟವಾಡುವಾಗ ಸಮುದ್ರದ ಅಲೆಗೆ ಕೊಚ್ಚಿಹೋಗಿ ನಾಲ್ವರು ವಿಧ್ಯಾರ್ಥಿನಿಯರು ಸಾವನ್ನಪ್ಪಿದ್ದರು ಮತ್ತು 3 ವಿಧ್ಯಾರ್ಥಿನಿಯರು ತೀವ್ರ ಅಸ್ವಸ್ಥರಾಗಿದ್ದರು. ಈ ಘಟನೆಯಿಂದ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು. ಇನ್ನು ಮುಂದೆ ಶೈಕ್ಷಣಿಕ ಪ್ರವಾಸವನ್ನು ನೀರಿರುವ ಸ್ಥಳಗಳಿಗೆ ಹಮ್ಮಿಕೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ.

ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಹಲವಾರು ನಿರ್ಬಂಧಗಳು !

  • ಕೇವಲ ದೇವಾಲಯ, ವಸ್ತು ಸಂಗ್ರಹಾಲಯ,ಪ್ರಾಣಿ ಸಂಗ್ರಹಾಲಯಗಳಿಗೆ ಮಾತ್ರ ಶೈಕ್ಷಣಿಕ ಪ್ರವಾಸ ಕೈಗೊಳ್ಳಬೇಕು
  • ಮಕ್ಕಳಿಗೆ ಪ್ರವಾಸ ಕರೆದುಕೊಂಡು ಹೋದಾಗ ಶಾಲೆಯ ಮುಖ್ಯಸ್ಥರೇ ಜವಾಬ್ದಾರಿ..!
  • ಪೋಷಕರಿಂದ ಅನುಮತಿ ಪಡೆದ ಪತ್ರ ಶಾಲಾ ಮುಖ್ಯಸ್ಥರುಗಳ ಬಳಿ ಕಡ್ಡಾಯವಾಗಿ ಇರತಕ್ಕದ್ದು
  • ಪ್ರವಾಸದ ಸಮಯದಲ್ಲಿನ ಎಲ್ಲಾ ಆಗುಹೋಗುಗಳಿಗೆ ಸದರಿ ಶಾಲೆಗಳ ಮುಖ್ಯೋಪಾಧ್ಯಾಯರುಗಳೇ ನೇರ ಜವಾಬ್ದಾರಿ..
  • ಯಾವುದೇ ಸಮಸ್ಯೆಯಾದರು ಶಿಕ್ಷಣ ಇಲಾಖೆ ಜವಬ್ದಾರಿಯಲ್ಲ
  • ಪ್ರವಾಸಕ್ಕೆ ತೆರಳುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸತಕ್ಕದ್ದು
  • ಸುರಕ್ಷತಾ ಕ್ರಮವಾಗಿ ವಿದ್ಯಾರ್ಥಿಗಳು ಅಪಾಯದ ಸ್ಥಳಗಳಿಗೆ ಹಾಗೂ ನೀರಿಗೆ ಹೋಗದಂತೆ ಎಚ್ಚರಿಕೆ ವಹಿಸುವುದು ಶಿಕ್ಷಕರ ಜವಬ್ದಾರಿ.
  • ಕಡ್ಡಾಯವಾಗಿ ಮಹಿಳಾ ಶಿಕ್ಷಕಿಯರುಗಳನ್ನು ಶೈಕ್ಷಣಿಕ ಪ್ರವಾಸಕ್ಕೆ ನೇಮಿಸುವುದು
  • ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಮುಂಜಾಗ್ರತೆಯಾಗಿ ಪ್ರಥಮ ಚಿಕಿತ್ಸೆಯ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಬೇಕು
  • ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾದಲ್ಲಿ ತುರ್ತಾಗಿ ವೈದ್ಯಕೀಯ ವ್ಯವಸ್ಥೆ ಮಾಡಬೇಕು
    ಹೀಗೆ ಹತ್ತು ಹಲವು ಷರತ್ತು ಗಳನ್ನು ಹಾಕಿರೋ ಬಿಬಿಎಂಪಿ ಆಯುಕ್ತರು

RELATED ARTICLES

Related Articles

TRENDING ARTICLES