Thursday, January 16, 2025

ಭಾರತಕ್ಕೆ ವಿಶ್ವ ಚೆಸ್​ ಚಾಂಪಿಯನ್​ಶಿಪ್​ ಪಟ್ಟ: ಕಂಡ ಕನಸನ್ನು ನನಸಾಗಿಸಿಕೊಂಡ ಗುಕೇಶ್​​ !

ಸಿಂಗಾಪುರ : ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಚೀನಾದ ಡಿಂಗ್ ಲಿರೆನ್ ಅವರನ್ನು ಮಣಿಸುವ ಮೂಲಕ ಗುಕೇಶ್ ಕೇವಲ 18ನೇ ವಯಸ್ಸಿಗೆ ಚಾಂಪಿಯನ್ ಆಗುವ ಮೂಲಕ ಚೆಸ್ ಲೋಕದಲ್ಲಿ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ಪಟು ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ.

ತಮಿಳುನಾಡು ಮೂಲದ ಗುಕೇಶ್ ಮೇ 7, 2006 ರಂದು ಜನಿಸಿದರು. ಅವರ ಪೂರ್ಣ ಹೆಸರು ದೋಮರಾಜು ಗುಕೇಶ್. ಗುಕೇಶ್ ಅವರ ತಂದೆ ವೈದ್ಯರಾಗಿದ್ದರೆ, ಅವರ ತಾಯಿ ವೃತ್ತಿಯಲ್ಲಿ ಮೈಕ್ರೋಬಯಾಲಜಿಸ್ಟ್ ಆಗಿದ್ದಾರೆ. ಗುಕೇಶ್ ಏಳನೇ ವಯಸ್ಸಿನಲ್ಲಿ ಚೆಸ್ ಆಡಲು ಪ್ರಾರಂಭಿಸಿದರು. ಅವರಿಗೆ ಆರಂಭದಲ್ಲಿ ಭಾಸ್ಕರ್ ತರಬೇತಿ ನೀಡುತ್ತಿದ್ದರು. ಇದಾದ ನಂತರ ಸ್ವತಃ ಭಾರತದ ಚೆಸ್​ ಚಾಂಪಿಯನ್​ ವಿಶ್ವನಾಥನ್ ಆನಂದ್ ಗುಕೇಶ್​ಗೆ ಚೆಸ್ ಆಟದ ಬಗ್ಗೆ ತಿಳಿಸಿ ತರಬೇತಿ ನೀಡಿದ್ದರು.

ಕನಸನ್ನು ನನಸಾಗಿಸಿಕೊಂಡ ಛಲಗಾರ ಗುಕೇಶ್​ !

ಗುಕೇಶ್​​ ಚೆಸ್​ ವಿಶ್ವ ಚಾಂಪಿಯನ್​ ಶಿಪ್​ನಲ್ಲಿ ಗೆಲುವು ಸಾಧಿಸುತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಸಂದರ್ಶನದ ವಿಡಿಯೋವೊಂದು ಹರಿದಾಡುತ್ತಿದೆ. ಈ ಸಂದರ್ಶನದಲ್ಲಿ ಗುಕೇಶ್​ ‘ನಾನು ವಿಶ್ವದ ಕಿರಿಯ ಚೆಸ್​ ಚಾಂಪಿಯನ್​​ ಆಗಬೇಕು ಎಂಬ ಕನಸನ್ನು ವ್ಯಕ್ತಪಡಿಸಿದ್ದರು.

ಈಗ ಅದರಂತೆ ಗುಕೇಶ್​ ತನ್ನ ಕನಸನ್ನು ಈಡೇರಿಸಿಕೊಂಡಿದ್ದು. ಕೇವಲ 18 ವರ್ಷ 8 ತಿಂಗಳು, 14 ದಿನಗಳಲ್ಲೆ ಈ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಇವರಿಗೂ ಮುನ್ನ ರಷ್ಯಾದ ರಿ ಕಾಸ್ಪರೋವ್ ಅವರು 1985 ರಲ್ಲಿ ಅನಾಟೊಲಿ ಕಾರ್ಪೋವ್ ಅವರನ್ನು ಸೋಲಿಸುವ ಮೂಲಕ ಕೇವಲ 22 ನೇ ವಯಸ್ಸಿನಲ್ಲಿ ಈ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ಅತಿ ಕಿರಿಯ ಎನಿಸಿಕೊಂಡಿದ್ದರು.

24 ವರ್ಷದ ನಂತರ ಮತ್ತೆ ಭಾರತಕ್ಕೆ ವಿಶ್ವ ಚೆಸ್ ಚಾಂಪೀಯನ್​ಶಿಪ್​​ ಕೀರಟ !

2000 ನೇ ಇಸವಿಯಲ್ಲಿ ಭಾರತದ ಚೆಸ್​ ದಿಗ್ಗಜ ವಿಶ್ವನಾಥ್​ ಆನಂದ್​ ಈ ದಾಖಲೆಯನ್ನು ಮಾಡಿ ಭಾರತದ ಗರಿಮೆಯನ್ನು ವಿಶ್ವದಲ್ಲೆಡೆ ಪಸರಿಸಿದ್ದರು. ಇದೀಗ ಗುಕೇಶ್​ ಕೂಡ ಇಂತಹ ಸಾಧನೆ ಮಾಡುವ ಮೂಲಕ ವಿಶ್ವವೆ ಭಾರತವನ್ನು ತಿರುಗಿ ನೋಡುವ ಹಾಗೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES