ದಾವಣಗೆರೆ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಗ ಜಾಮೀನು ದೊರೆತಿದ್ದು. ದರ್ಶನ್ ಸೇರಿ 7 ಜನರಿಗೆ ರೆಗ್ಯುಲರ್ ಬೇಲ್ ದೊರೆತಿದೆ. ಇದರ ಕುರಿತು ಮೃತ ರೇಣುಕಾಸ್ವಾಮಿ ತಂದೆ ಮಾಧ್ಯಮದೊಂದಿಗೆ ಮಾತನಾಡಿದ್ದು. ಅಂತಿಮ ನ್ಯಾಯಾಲಯದ ಮೇಲೆ ನಂಬಿಕೆ ಇದೆ. ನಮಗೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಹೈಕೋರ್ಟ್ನ ನ್ಯಾಯಾದೀಶ ವಿಶ್ವಜಿತ್ ಪೀಠ ಜಾಮೀನು ಜಾಮೀನು ಮಂಜೂರು ಮಾಡಿದ್ದು. ಇದರ ಕುರಿತು ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ‘ ಆರೋಪಿಗಳಿಗೆ ಜಾಮೀನಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿಯಿತು. ಈಗ ಜಮೀನು ನೀಡಿದ್ದರೂ ಅಂತಿಮ ತೀರ್ಪಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಶಿವನ ಗೌಡರು ‘ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ, ಅದರ ತೀರ್ಮಾನಕ್ಕೆ ನಾವು ಬದ್ದರಾಗಿದ್ದೇವೆ ಎಂದು ಹೇಳಿದರು.
ದರ್ಶನ್ ನಿಮ್ಮ ಮನೆಗೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ರೇಣುಕಾಸ್ವಾಮಿ ತಂದೆ ‘ಅವರು ನಮ್ಮ ಮನೆಗೆ ಬಂದರೆ ಎಂಬ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ, ದರ್ಶನ್ ನಮ್ಮ ಮನೆಗೆ ಬರುವುದು ಬೇಕಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಬೇಕಿದೆ ಎಂದು ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಹೇಳಿದರು.