Tuesday, January 14, 2025

ಪುಷ್ಪಾ ಸಿನಿಮಾ ಖ್ಯಾತ ನಟ ಅಲ್ಲು ಅರ್ಜುನ್​ ಬಂಧನ

ಹೈದರಬಾದ್​​ : ಖ್ಯಾತ ತೆಲಗು ನಟ ಅಲ್ಲು ಅರ್ಜುನ್​ ಅರೆಸ್ಟ್​​​ ಆಗಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಆಂದ್ರಪ್ರದೇಶದ ಚಿಕ್ಕಡಪಲ್ಲಿ ಪೋಲಿಸರು ಅಲ್ಲು ಅರ್ಜುನರನ್ನು ಅರೆಸ್ಟ್​ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪುಷ್ಪ 2 ಸಿನಿಮಾದ ಪ್ರೀಮಿಯರ್​ ಶೋವನ್ನು ಹೈದರಾಬಾದ್​ನ ಸಂಧ್ಯಾ ಟಾಕೀಸ್​ನಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಅಲ್ಲು ಅರ್ಜುನ್​ ಈ ಟಾಕೀಸಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್​ರನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಈ ವೇಳೆ ನೂಕು ನುಗ್ಗಲು ಉಂಟಾಗಿ ರೇವತಿ ಎಂಬ ಮಹಿಳೆಯೊಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು ಮತ್ತು ಇವರ 7 ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೆ ಸಂತಾಪ ವ್ಯಕ್ತಪಡಿಸಿದ್ದ ಅಲ್ಲು ಅರ್ಜುನ್​ ಮಹಿಳೆಯ ಕುಟುಂಬಕ್ಕೆ 25 ಲಕ್ಷ  ಪರಿಹಾರವನ್ನು ಘೋಷಿಸಿದ್ದರು.

ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದ ಚಿಕ್ಕಡಪಲ್ಲಿ ಪೋಲಿಸರು ಟಾಕೀಸಿನ ಮಾಲೀಕ ಮತ್ತು ಮ್ಯಾನೇಜರ್​ರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಇಂದು ಪೋಲಿಸರು ನಟನನ್ನೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು. ಹೆಚ್ಚಿನ ವಿಚಾರಣೆಗಾಗಿ ಪೋಲಿಸ್​ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES