ತುಮಕೂರು: ರೀಲ್ಸ್ ಹುಚ್ಚಿಗೆ ಮತ್ತೆ ಡ್ರೋನ್ ಪ್ರತಾಪ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು. ಸೋಡಿಯಂ ಮೆಟಲ್ನ್ನು ನೀರಿನಲ್ಲಿ ದೊಡ್ಡ ಮಟ್ಟದ ಸ್ಪೋಟ ಮಾಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಮಿಡಿಗೇಶಿ ಪೋಲಿಸರು ಇಂದು ಸ್ಪೋಟ ಮಾಡಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯೂಟ್ಯೂಬ್ಗೆ ವಿಡಿಯೋ ಅಪ್ಲೋಡ್ ಮಾಡಲು ಪ್ರತಾಪ್ ಸುಮಾರು 1ಕೆಜಿಯಷ್ಟು ಸೋಡಿಯಂ ಮೆಟಲ್ನ್ನು ಕೃಷಿ ಹೊಂಡಕ್ಕೆ ಎಸೆದು ದೊಡ್ಡ ಮಟ್ಟದ ಸ್ಫೋಟ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಇದರ ಕುರಿತು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪ್ರತಾಪ್ನನ್ನು ಪೋಲಿಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಬಿಎನ್ಎಸ್ ಕಾಯಿದೆ ಸೆಕ್ಷನ್ 288 ಮತ್ತು ಸ್ಪೋಕಟ ವಸ್ತುಗಳ ಕಾಯಿದೆ ಸೆಕ್ಷನ್ 3 ರ ಅಡಿ ಎಫ್ಐಆರ್ ದಾಖಲಿಸಿರುವ ಪೊಲೀಸರು. ಪ್ರತಾಪ್ ಸೇರಿದಂತೆ ಮೂರು ಜನರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪೋಲಿಸರಿಂದ ಸ್ಥಳ ಪರಿಶೀಲನೆ !
ಸೋಡಿಯಂ ಮೆಟಲ್ ಸ್ಪೋಟ ಮಾಡಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡ್ರೋನ್ ಪ್ರತಾಪ್ನನ್ನು ವಿಚಾರಣೆಗೆ ಒಳಪಡಿಸಿರುವ ಪೋಲಿಸರು. ಇಂದು ಪ್ರತಾಪ್ನೊಂದಿಗೆ ಸ್ಪೋಟ ನಡೆಸಿದ್ದ ಸ್ಥಳವಾದ ಚಿನಕಲೋಟಿ ಗ್ರಾಮದ ಬೃಂದಾವನ ಫಾರ್ಮ್ಸ್ ಬಳಿಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಸೆಕ್ಷನ್ 288ರಡಿಯಲ್ಲಿ 6 ತಿಂಗಳು ಶಿಕ್ಷೆಗೆ ಗುರಿಯಾಗುತ್ತಾರಾ ಪ್ರತಾಪ್ ?
ಭಾರತೀಯ ಸುರಕ್ಷಾ ಸಂಹಿತೆಯ ಕಲಂ 288ರಡಿಯಲ್ಲಿ ಯಾವುದೇ ವ್ಯಕ್ತಿ ಸ್ಪೋಟಕ ವಸ್ತುವಿನಿಂದ ಆಗುವ ಪರಿಣಾಮವನ್ನು ತಿಳಿದು ಹಾಗೂ ನಿರ್ಲಕ್ಷದಿಂದ ಸ್ಪೋಟ ಮಾಡಿದರೆ. ಅಂತಹ ವ್ಯಕ್ತಿಯನ್ನು ಈ ಕಲಂ ಅಡಿಯಲ್ಲಿ ಶಿಕ್ಷಗೆ ಗುರಿಪಡಿಸಲಾಗುತ್ತದೆ. ಈ ಕಲಂ ಅಡಿಯಲ್ಲಿ ತಪ್ಪಿತಸ್ಥ ಎಂದು ಸಾಬೀತಾದರೆ ಅಂತಹ ವ್ಯಕ್ತಿಯನ್ನು 6 ತಿಂಗಳ ಸಾದಾ ಜೈಲು ಶಿಕ್ಷೆ ಅಥವಾ 5 ಸಾವಿರ ರೂಪಾಯಿ ದಂಡದಿಂದ ಅಥವಾ ಎರಡರಿಂದ ಶಿಕ್ಷಿಸಲಾಗುತ್ತದೆ.