ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳುವ ಚಿಕ್ಕಮಗಳೂರು ತಾಲೂಕಿನ ಶ್ರೀಗುರುದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾ ಇನಾಂ ದತ್ತಪೀಠದಲ್ಲಿ ದತ್ತಮಾಲಾ ಅಭಿಯಾನ ಆರಂಭಗೊಂಡಿದೆ. ಚಿಕ್ಕಮಗಳೂರು ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ಕಾರ್ಯಕರ್ತರು ಮಾಲಾಧಾರಿಗಳಾಗಿದ್ದು, ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಕೂಡ ದತ್ತಮಾಲೆ ಧರಿಸಿದ್ದಾರೆ.
ದತ್ತಮಾಲೆ ಧರಿಸಿರುವ ಸಿ.ಟಿ ರವಿ, ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ ನಡೆಸಿದ್ದಾರೆ. ಸಿ.ಟಿ ರವಿ ಸೇರಿದಂತೆ ಅನೇಕ ಮಾಲಾಧಾರಿಗಳಿಂದ ಭಿಕ್ಷಾಟನೆ ನಡೆದಿದ್ದು. ಚಿಕ್ಕಮಗಳೂರು ಜಿಲ್ಲೆಯೆ ನಾರಾಯಣ ಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ ಭಿಕ್ಷಾಟನೆ ನಡೆಸಿದ್ದಾರೆ.
ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿರುವ ಮಾಲಾಧಾರಿಗಳು. ಪಡಿ ರೂಪದಲ್ಲಿ ಅಕ್ಕಿ, ಬೆಲ್ಲ, ಕಾಯಿಯನ್ನು ಸಂಗ್ರಹಿಸಿದ್ದಾರೆ. ಭಿಕ್ಷಾಟನೆಯಲ್ಲಿ ಸಂಗ್ರಹಿಸಿರುವ ಈ ಪಡಿಯನ್ನು ನಾಳೆ (ಡಿ.14)ರಂದು ಇರುಮುಡಿಯ ರೂಪದಲ್ಲಿ ದತ್ತಾತ್ರೆಯರಿಗೆ ಅರ್ಪಿಸುತ್ತಾರೆ ಎಂದು ತಿಳಿದು ಬಂದಿದೆ.