ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು. 7 ತಿಂಗಳ ಬಳಿಕ ರೆಗ್ಯೂಲರ್ ಬೇಲ್ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಮೆಡಿಕಲ್ ಬೇಲ್ ಮೇಲೆ ಜೈಲಿನಿಂದ ಹೊರಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ 42 ದಿನಗಳ ಮೆಡಿಕಲ್ ಬೇಲ್ ಪಡೆದಿದ್ದರು. ಈ ಜಾಮೀನಿಗೆ ತಮ್ಮ ದಿನಕರ್ ತೂಗುದೀಪ್ ಮತ್ತು ನಟ ಧನ್ವೀರ್ ಜಾಮೀನು ನೀಡಿದ್ದರು. ಮೆಡಿಕಲ್ ಬೇಲ್ ಪಡೆದು ಹೊರಬರುತ್ತಿದ್ದಂತೆ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಆಪರೇಶನ್ ಮಾಡಿಸಿಕೊಳ್ಳದೆ ಕಳ್ಳಾಟವಾಡುತ್ತಿದ್ದನು. ದರ್ಶನ್ಗೆ ನೀಡಿರುವ ಮೆಡಿಕಲ್ ಬೇಲ್ ಕ್ಯಾನ್ಸಲ್ ಮಾಡಬೇಕು ಎಂದು ಬೆಂಗಳೂರು ಪೋಲಿಸರು ಸುಪ್ರೀ ಕೋರ್ಟ್ ಮೊರೆ ಹೋಗಿದ್ದರು.
ಆದರೆ ಇಂದು ಹೈಕೋರ್ಟ್ನ ನ್ಯಾಯಾದೀಶ ದರ್ಶನ್ ಸೇರಿದಂತೆ 7 ಜನ ಆರೋಪಿಗಳಿಗೆ ರಿಲೀಫ್ ನೀಡಿದ್ದು. ಷರತ್ತುಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.