Wednesday, January 15, 2025

ಗರುಡ ಪುರಾಣದ ವಿಧಿ ವಿಧಾನದಂತೆ ನಡೆಯಲಿದೆ SMK ಅವರ ಅಂತ್ಯ ಸಂಸ್ಕಾರ !

ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್​ಎಂ ಕೃಷ್ಣರವರು ದೈವಾಧೀನರಾಗಿದ್ದು. ಇಂದು ಸಂಜೆ 3 ಗಂಟೆಯ ನಂತರ ಅವರ ಸ್ವಗ್ರಾಮವಾದ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ. ಅವರ ಅಂತಿಮ ಸಂಸ್ಕಾರ ಹೇಗೆ ನಡೆಯಲಿದೆ ಎಂದು ವೈದಿಕ ಚಿಂತಕ ಭಾನುಪ್ರಕಾಶ್​ ಶರ್ಮ ಅವರು ವಿವರಿಸಿದ್ದು ಗರುಡ ಪುರಾಣದಲ್ಲಿ ವಿವರಿಸಿರುವ ವಿಧಿವಿಧಾನದಂತೆ ಅವೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಎಸ್​.ಎಂ ಕೃಷ್ಣರ ಮೃತದೇಹಕ್ಕೆ ಅವರ ಸಹೋದರನ ಪುತ್ರ ಗುರುಚರಣ್​ ಮತ್ತು ಮೊಮ್ಮಗ ಅಮಾರ್ಥ್ಯ ಹೆಗ್ಡೆ ಅಗ್ನಿಸ್ಪರ್ಷ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದ್ದು. 15 ಮಂದಿ ವೇದ ಪಂಡಿತ ಸಮ್ಮುಖದಲ್ಲಿ ವಿಧಿವಿಧಾನನ ನಡೆಯಲಿದೆ ಎಂದು ತಿಳಿದು ಬಂದಿದೆ.

ಮಾಧ್ಯಮದೊಂದಿಗೆ ಮಾತನಾಡಿದ ವೈದಿಕ ಪಂಡಿತ ಭಾನುಪ್ರಕಾಶ್​ ಗುರೂಜಿ ‘ಎಸ್​ಎಂ ಕೃಷ್ಣರಿಗೆ  ಆಧ್ಯಾತ್ಮದಲ್ಲಿ ಶ್ರದ್ಧೆ ಇರೋ ಕಾರಣದಿಂದ‌ ವಿವಿಧ ವೇದ ಪುರಾಣಗಳ ಮೂಲಕ ಅಂತಿಮ ಸಂಸ್ಕಾರ ನೆರವೇರಲಿದೆ.  ಪಂಜಗೌವ್ಯ ಬಳಸಿ, ಗರುಡಪುರಣದ ಶ್ಲೋಕದ ಮೂಲಕದಿಂದ ಅಗ್ನಿ ಸಂಸ್ಕಾರ‌ ನಡೆಸಲಾಗುತ್ತದೆ. ದೇಹದ ಕಲ್ಮಶವನ್ನು, ಕೊಳೆಯನ್ನು ತೊಳೆದು 50ಕೆಜಿ ತುಪ್ಪ ಮತ್ತು 1 ಸಾವಿರ ಶ್ರೀ ಗಂಧದ ಕಟ್ಟಿಗೆ ಬಳಸಿ ಅಂತಿಮ ಸಂಸ್ಕಾರ ನಡೆಸಲಾಗುತ್ತದೆ ಎಂದು ಭಾನು ಪ್ರಕಾಶ್​​ ಶರ್ಮ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES