Tuesday, January 14, 2025

ಪಂಚಭೂತಗಳಲ್ಲಿ ಲೀನರಾದ ‘ಐಟಿಸಿಟಿ’ಯ ಹರಿಕಾರ ಎಸ್​.ಎಂ ಕೃಷ್ಣ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅಂತ್ಯಕ್ರಿಯೆ ಇಂದು ಸಂಜೆ ಅವರ ಸ್ವಗ್ರಾಮವಾದ ಸೋಮನಹಳ್ಳಿಯಲ್ಲಿ ನಡೆದಿದ್ದು. ಆಧುನಿಕ ಬೆಂಗಳೂರಿನ ಹರಿಕಾರ, ಕಾವೇರಿ ಒಡಲಿನ ಪುತ್ರ SM ಕೃಷ್ಣ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.

ಸೌಮ್ಯ ಸ್ವಭಾವವನ್ನೆ ತಮ್ಮ ಮೈಗೂಡಿಸಿಕೊಂಡಿದ್ದ ಎಸ್​.ಎಂ ಕೃಷ್ಣ ಕರ್ನಾಟಕ ರಾಜಕೀಯದಲ್ಲಿ ಅಜಾತ ಶತ್ರು ಎಂದೆ ಹೆಸರು ಪಡೆದಿದ್ದರು. ಯಾರೊಂದಿಗೂ ಮನಸ್ಥಾಪವಿಲ್ಲದೆ ಬದುಕಿದ ಈ ಜೀವ. ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು. ಎಂತಹ ಸಮಸ್ಯೆ ಬಂದರು ಅದನ್ನು ಎದುರಿಸಿ ರಾಜ್ಯವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ದರು.

ಇವರು 21ನೇ ಶತಮಾನದ ಆರಂಭದಲ್ಲಿ ಬೆಂಗಳೂರಿನಲ್ಲಿ ಬಿತ್ತಿದ ಬೀಜ ಇಂದು ಫಲ ನೀಡುತ್ತಿದ್ದು.  ಇಡೀ ದೇಶವೇ ಇಂದು ಬೆಂಗಳೂರನ್ನು ತಿರುಗಿ ನೋಡುತ್ತಿದೆ ಎಂದರೆ ಅದಕ್ಕೆ ಎಸ್​.ಎಂ ಕೃಷ್ಣರಲ್ಲದೆ ಬೇರಾರೂ ಕಾರಣರಲ್ಲ ಎಂದು ಹೇಳಿದರು ತಪ್ಪಾಗಲಾರದು.

ಕರ್ನಾಟಕ ರಾಜಕೀಯದ ಧೀಮಂತ ನಾಯಕ ಎಸ್​ಎಂ. ಕೃಷ್ಣರ ಯುಗಾಂತ್ಯವಾಗಿದ್ದು. ಸಂಜೆ 5ಗಂಟೆ ವೇಳೆಗೆ ಅವರ ಮೊಮ್ಮಗ ಅಮರ್ಥ್ಯ ಹೆಗ್ಡೆಯವರು ಎಸ್​.ಎಂ ಕೃಷ್ಣರ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿವಿಧಾನಗಳು ನಡೆದಿದ್ದು. ಸುಮಾರು 50ಕೆಜಿ ತುಪ್ಪ ಮತ್ತು 1000 ಕೆಜಿ ಶ್ರೀಗಂಧವನ್ನು ಬಳಸಿ ಅವರ ಅಂತ್ಯಕ್ರಿಯೆ ಮಾಡಿದ್ದಾರೆ.

ದಶಕಗಳ ಕಾಲ ಕರ್ನಾಟಕ ರಾಜಕಾರಣದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ಎಸ್​.ಎಂ ಕೃಷ್ಣ ಅವರ ಯುಗಾಂತ್ಯವಾಗಿದ್ದು. ಅವರು ಕರ್ನಾಟಕ ಜನರ ಮನಸ್ಸಲ್ಲಿ ಎಂದಿಗೂ ಅಜರಾಮರರಾಗಿದ್ದಾರೆ

RELATED ARTICLES

Related Articles

TRENDING ARTICLES