Sunday, December 22, 2024

ಎಸ್​.ಎಂ ಕೃಷ್ಣರ ವಿವಾಹ ಲಗ್ನ ಪತ್ರಿಕೆ ವೈರಲ್​ : ಶಾಲಾ ಕಟ್ಟಡದಲ್ಲಿ ನಡೆದಿತ್ತು SMK ಅವರ ವಿವಾಹ!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್​ಎಂ. ಕೃಷ್ಣರವರು ಅಸ್ತಂಗತರಾಗಿದ್ದು. ಎಲ್ಲಡೆ ಅವರ ನೆನಪುಗಳು ಅವರ ಬಂಧುಗಳು ಮತ್ತು ಅವರ ಅಭಿಮಾನಿಗಳನ್ನು ಕಾಡುತ್ತಿವೆ. ಅವರ ಅಭಿವೃದ್ದಿ ಕಾರ್ಯಗಳು ಅವರನ್ನು  ಜನರ ಮನಸಿನಲ್ಲಿ ಎಂದಿಗೂ ಅಜರಾಮರರಾಗಿ ಮಾಡಿವೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆಯ ಲಗ್ನಪತ್ರಿಕೆ ಹರಿದಾಡುತ್ತಿದೆ.

ಏನಿದೆ ಅವರ ಲಗ್ನ ಪತ್ರಿಕೆಯಲ್ಲಿ!

ಮಾಜಿ ಮುಖ್ಯಮಂತ್ರಿ ಎಸ್​.ಎಂ ಕೃಷ್ಣ ಅವರು 29 ಏಪ್ರಿಲ್​ 1966ರಲ್ಲಿ ಶಿವಮೊಗ್ಗದ ಕುಡು ಮಲ್ಲಿಗೆ ಗ್ರಾಮದ ಪ್ರೇಮರನ್ನು ವಿವಾಹವಾಗಿದ್ದು. ಶಿವಮೊಗ್ಗದ ನ್ಯಾಷನಲ್​ ಹೈಸ್ಕೂಲ್​ನಲ್ಲಿ ವಿವಾಹವಾದ ಬಗ್ಗೆ ಈ ವಿವಾಹ ಪತ್ರಿಕೆಯಲ್ಲಿ ನಮೂದಿಸಿದ್ದನ್ನು ಕಾಣಬಹುದಾಗಿದೆ.

ಏಪ್ರಿಲ್​ 29ರ ಬೆಳಿಗ್ಗೆ 8 ಗಂಟೆಯಿಂದ 10 ಗಂಟೆಯ ಶುಭ ಮೂಹರ್ತದಲ್ಲಿ ವಿವಾಹವಾದ ಬಗ್ಗೆ ಈ ಪತ್ರಿಕೆಯಲ್ಲಿ ವಿವರವಿದ್ದು. ಅದೇ ದಿನ ಸಂಜೆ 6 ರಿಂದ 8 ಗಂಟೆಗೆ ಅವರ ಆರತಕ್ಷತೆ ನಡೆದಿದೆ ಎಂದು ಇದರಲ್ಲಿ ನಮೂದಿಸಲಾಗಿದೆ.

RELATED ARTICLES

Related Articles

TRENDING ARTICLES