Thursday, December 12, 2024

ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಗಣ್ಯರಿಂದ SMKಗೆ ಅಂತಿಮ ನಮನ !

ಮಂಡ್ಯ : ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಕೃಷ್ಣ ಪಥ ಯುಗಾಂತ್ಯವಾಗಿದ್ದು, ಇಂದು ಮಂಡ್ಯದ ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಈ ವೇಳೆ ರಾಜ್ಯ ಕಂಡ ಧೀಮಂತ ನಾಯಕನಿಗೆ ರಾಜಕೀಯ ಗಣ್ಯರು ಅಶ್ರು ತರ್ಪಣದ ಮೂಲಕ ಗೌರವ ಸೂಚಿಸಿದ್ದಾರೆ.

ರಾಜ್ಯ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​, ಯಡಿಯೂರಪ್ಪ, ಕುಮಾರಸ್ವಾಮಿ, ಬಸವರಾಜ್​ಬೊಮ್ಮಾಯಿ, ಆರ್​.ಅಶೋಕ್​, ವಿಜಯೇಂದ್ರ, ಕೆ.ಎಚ್​. ಮುನಿಯಪ್ಪ, ಎಚ್​​.ಸಿ ಮಹದೇವಪ್ಪ, ಪರಮೇಶ್ವರ್​, ಎಚ್​.ಕೆ ಪಾಟೀಲ್​, ಸುಧಾಕರ್​, ಸಿ.ಟಿ ರವಿ, ಅಶ್ವತ್​ ನಾರಾಯಣ್​, ಲಕ್ಷ್ಮಿ ಹೆಬ್ಬಳ್ಕಾರ್, ಪ್ರಹ್ಲಾಧ್​ ಜೋಶಿ ​ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಅಗಲಿದ ಎಸ್​.ಎಂ ಕೃಷ್ಣರಿಗೆ ಗೌರವ ತೋರಿದರು.

ನಂತರ ಪೋಲಿಸರು ಮೂರು ಸುತ್ತುಗಳ ಕುಶಾಲಾತೋಪು ಸಿಡಿಸುವ ಮೂಲಕ ಸರ್ಕಾರದ ವತಿಯಿಂದ ಸಲ್ಲಿಸಬೇಕಿದ್ದ ಗೌರವವನ್ನು ಸಲ್ಲಿಸಿ. ಶ್ರದ್ದಾಂಜಲಿಯನ್ನು ಅರ್ಪಿಸಿದರು. ಗೌರವಾರ್ಥವಾಗಿ ಎಸ್​.ಎಂ ಕೃಷ್ಣರಿಗೆ ಹೊದಿಸಿದ್ದ ತಿವರ್ಣ ಧ್ವಜವನ್ನು ತೆಗೆದು ಅದನ್ನು ಅವರ ಕುಟುಂಬಸ್ಥರಿಗೆ ನೀಡುವ ಮೂಲಕ ರಾಜ್ಯ ಕಂಡ ಅಜಾತ ಶತ್ರು ರಾಜಕಾರಣಿಗೆ ಗೌರವ ಸೂಚಿಸಲಾಗಿದೆ.

RELATED ARTICLES

Related Articles

TRENDING ARTICLES