Sunday, February 2, 2025

ಒಡೆಯರ್​ ಮಗನಿಗೆ ತೊಟ್ಟಿಲು ಶಾಸ್ತ್ರ : ಚಾಮುಂಡಿ ಬೆಟ್ಟದಲ್ಲಿ ತೊಟ್ಟಿಲು ಕಟ್ಟಿ ವಿಶೇಷ ಪೂಜೆ !

ಮೈಸೂರು : ಸಂಸದ ಯದುವೀರ್​ ಒಡೆಯರ್​ ಮತ್ತು ತ್ರಿಷಿಕ ಕುಮಾರಿಯವರ 2ನೇ ಪುತ್ರನಿಗೆ ತೊಟ್ಟಿಲು ಶಾಸ್ತ್ರ ನೆರವೇರಿದ್ದು. ಚಾಮುಂಡಿ ಬೆಟ್ಟದಲ್ಲಿ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಅಕ್ಟೋಬರ್​ 14ರಂದು ತ್ರಿಷಿಕಾ ಕುಮಾರಿಯವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ದಸರಾ ಹಬ್ಬದ ದಿನವೇ ಮಗು ಜನಿಸಿದ್ದ ಹಿನ್ನಲೆ ಹಬ್ಬದ ಸಂತಸ ಮತ್ತಷ್ಟು ಹೆಚ್ಚಿತ್ತು. ಇದರ ಹಿನ್ನಲೆಯಲ್ಲೆ ಚಾಮುಂಡಿ ಬೆಟ್ಟದಲ್ಲಿ ಎರಡನೇ ಪುತ್ರನಿಗೆ ತೊಟ್ಟಿಲು ಶಾಸ್ತ್ರ ನೆರವೇರಿದ್ದು. ಚಾಮುಂಡಿ ಬೆಟ್ಟದಲ್ಲಿನ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟುವ ಮೂಲಕ ವಿಶೇಷ ಪೂಜೆ ನೆರವೇರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಮಾರಂಭದಲ್ಲಿ ಸಂಸದ ಯದುವೀರ್​ ಒಡೆಯರ್, ಅವರ ಪತ್ನಿ ತ್ರಿಷಿಕಾ ಕುಮಾರಿ ಮತ್ತು ರಾಜಮಾತೆ ಪ್ರಮೋದ ದೇವಿ ಒಡೆಯರ್ ಭಾಗವಿಹಿಸಿದ್ದರು.

ಯದುವೀರ್​ ಕೃಷ್ಣದತ್ತ ಚಾಮರಾಜ್​ ಒಡೆಯರ್​ ಮತ್ತು ತ್ರಿಷಿಕಾ ಕುಮಾರಿಯವರಿಗೆ 2017ರ ಡಿಸೆಂಬರ್​ 6ರಂದು ಮೊದಲ ಪುತ್ರ ಆದ್ಯವೀರ್​ ಜನಿಸಿದ್ದರು.

RELATED ARTICLES

Related Articles

TRENDING ARTICLES