ಚಾಮರಾಜನಗರ : ಕೊಳ್ಳೆಗಾಲದ ಮಾಜಿ ಶಾಸಕ ಎಸ್.ಜಯಣ್ಣ ನೆನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದು. ಅವರ ಅಂತಿಮ ದರ್ಶನವನ್ನು ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡರು.
ಕೊಳ್ಳೇಗಾಲ ಪಟ್ಟಣಕ್ಕೆ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಸಿಎಂ ಸಿದ್ದರಾಮಯ್ಯ ‘ ಸುಮಾರು 11:50ರ ಸುಮಾರಿಗೆ ಜಯಣ್ಣರ ಮನೆಗೆ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದ ಸಿದ್ದರಾಮಯ್ಯ. ಜಯಣ್ಣರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಈ ವೇಳೆ ಸಮಾಜಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್, ಯತೀಂದ್ರ ಸಿದ್ದರಾಮಯ್ಯ, ಎ.ಆರ್ ಕೃಷ್ಣಮೂರ್ತಿ, ಹೆಚ್ ಎಂ ಗಣೇಶ ಪ್ರಸಾದ್
ಜಿಲ್ಲಾಧಿಕಾರಿ ಶಿಲ್ಪಾನಾಗ್ ಇತರ ಅಧಿಕಾರಿಗಳು ಭಾಗಿಯಾಗಿದ್ದರು.
ಜಯಣ್ಣರ ಕುರಿತು ಸಿಎಂ ಮಾತು !
ಅಂತಿಮ ದರ್ಶನ ಪಡೆದು ಮಾತನಾಡಿದ ಸಿದ್ದರಾಮಯ್ಯ ‘ ಜಯಣ್ಣ ಒಬ್ಬ ಪ್ರಾಮಾಣಿಕ, ಸರಳ ಸಜ್ಜನಿಕೆಯ ವ್ಯಕ್ತಿ, 1983ರಲ್ಲಿ ನನಗೆ ಪರಿಚಯವಾದರು. ಅಲ್ಲಿಂದನೂ ನನ್ನ ಜೊತೆ ಇದ್ದಾರೆ. ನಾನು ಪಕ್ಷ ಬದಲಾವಣೆ ಮಾಡಿದಾಗ ಅವರು ನನ್ನ ಜೊತೆ ಬಂದರು. ಆದರೆ ಅವರ ಪ್ರಾಮಾಣಿಕತೆಗೆ ಸರಿಯಾದ ಸ್ಥಾನಮಾನ ದೊರೆಯಲಿಲ್ಲ ಎಂದು ಹೇಳಿದರು.