ಹಾಸನ: ಬೈಕ್ಗೆ ಕಾರು ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಹಾಸನದ ಕಿತ್ತಾನೆ ಗಡಿಯಲ್ಲಿ ನಡೆದಿದ್ದು. ಕಳೆದ 15 ದಿನಗಳ ಹಿಂದೆ ಇದೆ ಸ್ಥಳದಲ್ಲಿ ಪ್ರೋಬೇಶನರಿ ಪೋಲಿಸ್ ಆಫೀಸರ್ ಹರ್ಷಬರ್ದನ್ ಕೂಡ ಮೃತಪಟ್ಟಿದ್ದರು.
ಹಾಸನ ತಾಲ್ಲೂಕಿನ, ಕಿತ್ತಾನೆ ಗಡಿಯಲ್ಲಿ ಘಟನೆ ನಡೆದಿದ್ದು. ಸಾತೇನಹಳ್ಳಿ ಗ್ರಾಮದ 60 ವರ್ಷದ ಮಂಜೇಗೌಡ ಮೃತ ದುರ್ದವೈ ಎಂದು ಮಾಹಿತಿ ದೊರೆತಿದೆ. ಮಂಜೇಗೌಡ ಸಾತೇನಹಳ್ಳಿ ಗ್ರಾಮದಿಂದ ಬಂದು ಎನ್.ಎಚ್373 ರಲ್ಲಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. KA-13-EE-7583 ನಂಬರ್ನ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗೊರೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಇದೇ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಕಳೆದ 15 ದಿನಗಳ ಹಿಂದೆ ಇದೆ ಸ್ಥಳದಲ್ಲಿ ಪ್ರಬೇಶನರಿ ಐಪಿಎಸ್ ಅಧಿಕಾರಿ ಹರ್ಷಬರ್ಧನ್ ಕೂಡ ಅಪಘಾತದಲ್ಲಿ ಮರಣ ಹೊಂದಿದರು. ಕಿತ್ತಾಡಿ ಬಳಿಯಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚೆತ್ತುಕೊಂಡು ಹಂಪ್ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.