ಹೈದರಾಬಾದ್: ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಹೈದರಾಬಾದಿನ ಮುಶೀರಾಬಾದ್ನ ಒಂದು ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಕಲಬೆರಕೆ ಅಥವಾ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಚಿತ್ತಬೋಯಿನ ದಾಮೋದರ್ ಯಾದವ್ ಎಂದು ಗುರುತಿಸಲಾಗಿದೆ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ “ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನಂದಿನಿ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಇದನ್ನು ಮಾರಾಟ ಮಾಡುವಂತಿಲ್ಲ. ಆದರೆ ಯೋಗ್ಯವಲ್ಲದ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ನ್ನು ಅಕ್ರಮವಾಗಿ ಸಾಗಿಸಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.