Monday, December 23, 2024

ದರ್ಶನ್ ಸರ್ಜರಿಗೆ ಪತ್ನಿಯಿಂದ ಸಿಗದ ಅನುಮತಿ : ಇಂದಾದರು ನಡೆಯುತ್ತಾ ಸರ್ಜರಿ!

ಬೆಂಗಳೂರು : ಆರೋಗ್ಯ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ ಆಸ್ಪತ್ರೆಯಲ್ಲಿ ತನ್ನ ಕಳ್ಳಾಟವನ್ನು ಮುಂದುವರಿಸಿದ್ದಾನೆ. ನ್ಯಾಯಾಲಯ ನೀಡಿದ್ದ ಮಧ್ಯಂತರ ಜಾಮೀನಿನ ಅವಧಿ ಇಂದಿಗೆ ಮುಗಿದಿದ್ದು. ನ್ಯಾಯಾಲಯ ಮತ್ತೆ ಜಾಮೀನು ಅವಧಿಯನ್ನು ವಿಸ್ತರಿಸಿದೆ.

ಬೆನ್ನು ನೋವೆಂದು ಬಿಜಿಎಸ್​ ಆಸ್ಪತ್ರೆಯಲ್ಲಿ ಕಳೆದ 40 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್​ ಇನ್ನೂ ಶಸ್ತ್ರ ಚಿಕಿತ್ಸೆಗೆ ಒಪ್ಪಿಗೆ ಸೂಚಿಸಿಲ್ಲ. ದರ್ಶನ್​ ಪರ ವಕೀಲರು ಇಂದು (ಡಿ.11) ಆಪರೇಶನ್​ ನಡೆಯುತ್ತದೆ ಎಂದು ನ್ಯಾಯಾಲಯಕ್ಕೆ ಹೇಳಿ ಮಧ್ಯಂತರ ಜಾಮೀನನ್ನು ವಿಸ್ತರಿಸಿಕೊಂಡಿದ್ದರು. ಆದರೆ ಮಾಹಿತಿ ಪ್ರಕಾರ ಇನ್ನೂ ದರ್ಶನ್​ಗೆ ಸರ್ಜರಿ ನಡೆದಿಲ್ಲ ಎಂದು ಮಾಹಿತಿ ದೊರೆತಿದೆ.

ದರ್ಶನ್​ ಪತ್ನಿಯಿಂದ ಸಿಕ್ಕಿಲ್ಲ ಗ್ರೀನ್​ ಸಿಗ್ನಲ್​ !

ದರ್ಶನ್​ ಆರೋಗ್ಯವನ್ನು ಸಮತೋಲನಕ್ಕೆ ತಂದಿರುವ ವೈದ್ಯ ನವೀನ್​ ಗೌಡ ಸರ್ಜರಿಗೆ ಸಿದ್ದತೆ ನಡೆಸಿಕೊಂಡಿದ್ದಾರೆ. ಆದರೆ ದರ್ಶನ್​ ಅವರ ಪತ್ನಿ ಇನ್ನು ಕೂಡ ಸರ್ಜರಿಗೆ ಒಪ್ಪಿಗೆ ಸೂಚಿಸಿಲ್ಲ ಎಂದು ತಿಳಿದು ಬಂದಿದೆ. ಪತಿಯ ಆರೋಗ್ಯದ ಬಗ್ಗೆ ಇನ್ನು ಆತಂಕದಲ್ಲಿರುವ ಪತ್ನಿ ಸರ್ಜರಿಯಿಂದ ಆಗುವ ಪರಿಣಾಮದ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ವೈದ್ಯ ನವೀನ್​ ಅಪ್ಪಾಜಿಗೌಡ ಸರ್ಜರಿಯ ಅಗತ್ಯತೆ ಮತ್ತು ಯಾವುದೇ ಸಮಸ್ಯೆ ಆಗೋದಿಲ್ಲ ಎಂದು ಭರವಸೆ ನೀಡಿದ್ದರು ಕೂಡ ವಿಜಯಲಕ್ಷ್ಮಿಯವರು ಆತಂಕದಲ್ಲಿದ್ದಾರೆ. ವಿಜಯಲಕ್ಷ್ಮೀಯವರು ಓಕೆ ಎಂದ ತಕ್ಷಣವೇ ಸರ್ಜರಿ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

ಪವರ್​ ಟಿವಿಗೆ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದ್ದು. ಇಂದು ಸಂಜೆ ಅಥವಾ ರಾತ್ರಿ ವೇಳೆಗೆ ಸರ್ಜರಿ ನಡೆಯಲಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES