Saturday, December 21, 2024

ಹಿಂಸಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಸುವರ್ಣಸೌದದಲ್ಲಿ ಬಿಗಿ ಪೋಲಿಸ್​ ಭದ್ರತೆ !

ಬೆಳಗಾವಿ : ಪಂಚಮಸಾಲಿ ಮೀಸಲಾತಿ ಹೋರಾಟ ತೀವ್ರವಾಗಿದ್ದು. ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಪ್ರತಿಭಟನಾನಿರತರ ಮೇಲೆ ಪೋಲಿಸರು ಲಾಠಿಚಾರ್ಜ್​ ನಡೆಸಿದ್ದು.ಪೋಲಿಸರು ಮೇಲೆ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆ ಎಂದು ತಿಳಿದು ಬಂದಿದೆ.

ಪಂಚಮಸಾಲಿ ಹೋರಾಟದಿಂದ ಬೆಳಗಾವಿ ಕೊತಕೊತ ಕುದಿಯುತ್ತಿದ್ದು. ಕುಂದಾನಗರಿಯಲ್ಲಿ ಪ್ರತಿಭಟನೆಯ ಕಾವು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಪ್ರತಿಭಟನೆ ಹಿಂಸಾಚಾರ ಪಡೆದುಕೊಳ್ಳುತ್ತಿದ್ದಂತೆ ಶಾಸಕ  ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ಶಾಸಕ ಅರವಿಂದ್​ ಬೆಲ್ಲದ್​ರನ್ನು ಪೋಲಿಸರು ವಶಕ್ಕೆ ಪಡೆದಿದ್ದು. ಪೋಲಿಸರು ಸುವರ್ಣ ಸೌದದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ ಎಂದು ತೀಳಿದು ಬಂದಿದೆ. ಹೋರಾಟಗಾರರು ಸುವರ್ಣ ಸೌದಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್​ಆರ್​ಪಿ ತುಕಡಿಗಳು ಮತ್ತು ವಾಟರ್​ ಜೆಟ್​ ಮತ್ತು ಆರ್​ಎಎಫ್​ ಪಡೆಗಳನ್ನು ನಿಯೋಜನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಕಿಲೋ ಮೀಟರ್​ಗಟ್ಟಲೇ ಟ್ರಾಫಿಕ್​ ಜಾಮ್​​ !

ಬೆಳಗಾವಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 6 ಕಿಮೀ ಟ್ರಾಫಿಕ್​ ಜಾಮ್​ ಆಗಿದೆ ಎಂದು ತಿಳಿದು ಬಂದಿದೆ. ಹೆದ್ದಾರಿಯಲ್ಲಿ ವಾಹನ ಸವಾರರು ಟ್ರಾಫಿಕ್​ ಜಾಮ್​ನಿಂದಾಗಿ ಹೈರಾಣಾಗಿದ್ದು. ಸಾಲುಗಟ್ಟಿ ವಾಹನಗಳು ನಿಂತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES